ಜಿಲ್ಲೆ

ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಪೂರ್ಣ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಪ್ರತಿ ವರ್ಷದಂತೆ ಈ ವರ್ಷವೂ ಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟವಾಗಿ ಆಚರಿಸಲು ಇಲ್ಲಿಯ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಅಣಿಯಾಗಿದೆ.
ಶಾಲೆಯಲ್ಲಿ ಆಗಸ್ಟ್ 26 ರಂದು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 9ಕ್ಕೆ ಮಾಧವನಗರದಿಂದ ಪ್ರಮುಖ ಬೀದಿಗಳ ಮೂಲಕ ಪ್ರತಾಪನಗರದ ಜನಸೇವಾ ಶಾಲೆ ವರೆಗೆ ಕೃಷ್ಣ- ರಾಧೆ ವೇಷಧಾರಿ ಮಕ್ಕಳ ಮೆರವಣಿಗೆ ಜರುಗಲಿದೆ ಎಂದು ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.
ಬೆಳಿಗ್ಗೆ 9.45ಕ್ಕೆ ಗೋ-ಪೂಜೆ, ತೊಟ್ಟಿಲು, ಕೃಷ್ಣ ವೇಷಧಾರಿಗಳಿಂದ ಮೊಸರು ಗಡಿಗೆ ಒಡೆಯುವ ಸ್ಪರ್ಧೆ, ಬೆಣ್ಣೆ ಸವಿಯುವುದು, ನೃತ್ಯ, ಮಾತೆಯರು-ಶಿಕ್ಷಕಿಯರಿಂದ ಕೋಲಾಟ ಜರುಗಲಿದೆ ಎಂದು ಹೇಳಿದ್ದಾರೆ.