ಔರಾದ್: ತಾಲೂಕು ಪ್ರಗತಿ ಪರಿಶೀಲನೆ ಸಭೆಗೆ ಗೈರಾದ 17 ಪ್ರಥಮ ದರ್ಜೆ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ರಾಮಚಂದ್ರ ಡಾಕುಳಗಿ, ದೀಪಾಕುಮಾರಿ ಬೀರಪ್ಪ, ಶ್ರೀನಿವಾಸ ಬಿ.ಕರಾಡೆ, ಶಿವರಾಜ ಫುಲೇಕರ್, ಬಂಡೆಪ್ಪ ಕಂಟೆ, ಹರೀಶ್ ಒಡೆಯರ್, ಮಾಣಿಕರಾವ ಯಾಬಾ, ಗುರುಸ್ವಾಮಿ, ಜೆ.ಎಂ. ಕನ್ಸ್ಟ್ರಕ್ಷನ್ಸ್, ಸುದರ್ಶನ್ ಬಿರಾದಾರ್, ಮಾಲಬಾ ಎಂ.ಉದಾಜಿ, ಕಮಲಾಕರ್ ಜೆ. ಪಾಟೀಲ್, ಸಂಜುಕುಮಾರ ಮಾಶೆಟ್ಟಿ, ಪ್ರಕಾಶ ಕೋಟೆ, ಸಂಗಮೇಶ, ವಿನೋದಕುಮಾರ ವಿ.ಅಪ್ಪೆ, ಅಮೃತಪ್ಪ ಮಾಶೆಟ್ಟಿ ಅವರಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ್ ಅವರು ಕಾರಣ ಕೇಳಿ ಗುರುವಾರ ನೋಟಿಸ್ ನೀಡಿದ್ದು, ಮೂರು ದಿನದಲ್ಲಿ ಉತ್ತರ ನೀಡಲು ಸೂಚಿಸಿದ್ದಾರೆ.
ಇತ್ತೀಚೆಗೆ ಪಟ್ಟಣದಲ್ಲಿ ಶಾಸಕ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆದಿತ್ತು. ಜೆಜೆಎಂ ಕಾಮಗಾರಿ ಕುರಿತು ಸುದೀರ್ಘವಾಗಿ ಪರಿಶೀಲನೆ ನಡೆಸಲಾಗಿತ್ತು. ತಾಲೂಕಿನ ಬಹುತೇಕ ಕಡೆ ಕಾಮಗಾರಿ ಕಳಪೆಯಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಚವ್ಹಾಣ್ ಸೂಚನೆ ನೀಡಿದರು. ಅದರಂತೆ ಇದೀಗ ನೋಟಿಸ್ ನೀಡಲಾಗಿದೆ.