ಬೀದರ್: ರಾಷ್ಟ್ರೀಯ ಹೆದ್ದಾರಿ-65 ನಿರ್ಣಾ ಕ್ರಾಸ್ ನಿಂದ ರೇಕುಳಗಿ ಗ್ರಾಮದ ಶ್ರೀ ಶಂಭುಲಿಂಗೇಶ್ವರ ಬಸಮ್ಮ ತಾಯಿ ದೇವಸ್ಥಾನವರೆಗಿನ ಐದು ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಆರಂಭಿಸಿದ್ದು, ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ರೇಕುಳಗಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅವರು, ಶಂಭುಲಿಂಗೇಶ್ವರ ದೇವಾಲಯಕ್ಕೆ ರಾಜ್ಯ, ಹೊರ ರಾಜ್ಯದ ಸಾವಿರಾರು ಭಕ್ತರು ನಿತ್ಯ ಆಗಮಿಸುತ್ತಾರೆ. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ ಬಹುದಿನದ ಬೇಡಿಕೆ ಈಗ ಈಡೇರಿದ್ದು, ಗುತ್ತಿಗೆದಾರ, ಅಧಿಕಾರಿಗಳು ಸೇರಿ ಗುಣಮಟ್ಟದ ಕೆಲಸ ಮಾಡಬೇಕು ಎಂದರು.
ಹಳ್ಳಿಗಳಿಂದ ಕೂಡಿದ ದಕ್ಷಿಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ. ಸೇವಕನಾಗಿ ಕೆಲಸ ಮಾಡುತ್ತಿದ್ದು, ಏನೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತರಬೇಕು ಎಂದು ಹೇಳಿದರು.
ಮಂತ್ರ ಮಹರ್ಷಿ ಎನ್.ಬಿ. ರಡ್ಡಿ ಗುರೂಜಿ ಮಾತನಾಡಿ, ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದು ಖುಷಿ ತಂದಿದೆ. ಕ್ಷೇತ್ರದಲ್ಲಿ ಶಾಸಕ ಬೆಲ್ದಾಳೆ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಮುಖಂಡರಾದ ಜಗನ್ನಾಥ ಪಾಟೀಲ್, ಶಿವಕುಮಾರ ಸ್ವಾಮಿ, ಸಂಗಪ್ಪ ಪಾಟೀಲ್, ವೈಜಿನಾಥ ಹಚ್ಚಿ, ಬಸವರಾಜ ಬೋರಾಳ, ವೀರಶೆಟ್ಟಿ ಚಟ್ನಳ್ಳಿ, ಘಾಳೆಪ್ಪ ಚಟ್ನಳ್ಳಿ, ವೀರಶೆಟ್ಟಿ ಭೂರೆ, ವೆಂಕಟೇಶ ಮಡಿವಾಳ, ರವಿ ಅಂಬಣ್ಣ, ಸುನೀತಾ ಭಕ್ತಕುಮಾರ, ಮಹೇಶ ಹಚ್ಚಿ, ನರಸಪ್ಪ, ಅಶೋಕ ಜಮಾದಾರ್, ರಾಜಕುಮಾರ ಪಾಂಚಾಳ, ಸೂರ್ಯಕಾಂತ ಪಾಟೀಲ್, ರಮೇಶ ನೀಲಾ, ಸಚಿನ್, ಅಡೆಪ್ಪ, ಸುಭಾಷ, ವಿಷ್ಣು ಇತರರಿದ್ದರು.