ಬೀದರ್: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ಇಲ್ಲಿಯ ಜಿಲ್ಲಾ ಬಾಲ ಭವನದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಲಕ, ಬಾಲಕಿಯರ ವಿಭಾಗದ ತಾಲ್ಲೂಕುಮಟ್ಟದ ಕರಾಟೆ ಸ್ಪರ್ಧೆ ನಡೆಯಿತು.
85 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಉತ್ತಮ ಪ್ರದರ್ಶನ ನೀಡಿ ಸಭಿಕರ ಗಮನ ಸೆಳೆದರು.
14 ವರ್ಷದ ಒಳಗಿನ ಹಾಗೂ 17 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಸಮೀರ್ ಅಲಿ, ಅನುರಾಗ್, ಎಸ್.ಕೆ. ಫಾರೂಕ್, ಸಲ್ಮಾನ್ ಅಲಿ, ಕಿಶೋರ ಟಿ., ಆದರ್ಶ, ಸಾಯಿನಾಥ, ನಜನೀನ್, ದಿವ್ಯಾ, ಹುಮೆರಾ ಸುಲ್ತಾನಾ, ರಾಹುಲ್, ಅರ್ಜುನ ಪಾಂಚಾಳ, ಹರಿಕಿರಣ್, ಭಗವಾನ್ ಪ್ರಸಾದ್, ಶಾಮ್, ರಿಕ್ಕಿ, ಅಬ್ರಾಹಂ, ವಿಜಯಕುಮಾರ, ಭಾಗ್ಯಲಕ್ಷ್ಮಿ, ಸಾಕ್ಷಿ, ಗಿರಿಜಾ, ಕಲಾವತಿ, ವೈಶಾಲಿ, ಖುಷಿ ಹಾಗೂ ಸಂಗೀತಾ ಸೇರಿ 26 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು.
ಸುವಿತ್ ಮೋರೆ, ಸುದೇಶ್ ಮೋರೆ, ಸಿದ್ಧಾರ್ಥ ಮೋರೆ, ನಾಗೇಶ, ಪ್ರದೀಪ್, ಮುಬಾರಕರ್, ನಿಶಿತ್ ಸಾವಳಗಿ, ಕೃಷ್ಣ, ಸಚಿನ್, ದಿನಾಕರ್ ದೇಸಾಯಿ ನಿರ್ಣಾಯಕರಾಗಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕ ಅನಂತಾಚಾರ್ಯ ಜೋಶಿ ಸ್ಪರ್ಧೆಯನ್ನು ಉದ್ಘಾಟಿಸಿದರು.
ಜಿಲ್ಲಾ ಕ್ರೀಡಾ ಕರಾಟೆ ಸ್ಪರ್ಧೆಯ ಅಧ್ಯಕ್ಷ ರಾಜಕುಮಾರ ಟಿಳ್ಳೆಕರ್ ಅಧ್ಯಕ್ಷತೆ ವಹಿಸಿದ್ದರು.
ಬಕ್ಕಪ್ಪ ಶೇರಿಕಾರ್, ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಸಂಜಯ್ ಮಾನೂರೆ, ಸಂಘದ ಜಂಟಿ ಕಾರ್ಯದರ್ಶಿ ತುಕಾರಾಮ ಚಿಮಕೋಡೆ, ಸಂತೋಷ್ ಪಾಟೀಲ, ಗುರುನಾಥ ಚಂದ್ರಪ್ಪ, ರಮೇಶ ಇದ್ದರು. ಜಿಲ್ಲಾ ಬಾಲ ಭವನದ ಸಂಯೋಜಕ ಸೂರ್ಯಕಾಂತ ಮೋರೆ ನಿರೂಪಿಸಿದರು.