ಜಿಲ್ಲೆ

ಕರವೇಗೆ ವೀರೇಶ ರೆಡ್ಡಿ ನೇಮಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕರ್ನಾಟಕ ರಕ್ಷಣಾ ವೇದಿಕೆಯ ಹುಮನಾಬಾದ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ವೀರೇಶ ರೆಡ್ಡಿ ಬಿ. ಬೊತಗಿಕರ್ ಅವರನ್ನು ನೇಮಕ ಮಾಡಲಾಗಿದೆ.
ಹುಮನಾಬಾದ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಅವರು ನೇಮಕಾತಿ ಪತ್ರ ವಿತರಿಸಿದರು.
ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸೂಚಿಸಿದರು.
ವೇದಿಕೆಯ ಜಿಲ್ಲಾ ಘಟಕದ ಕಾರ್ಯದರ್ಶಿ ವಿವೇಕ ನಿರ್ಮಳೆ, ಔರಾದ್ ತಾಲ್ಲೂಕು ಘಟಕದ ಉಪಾಧ್ಯಕ್ಷ ಅಮಿತ್ ಶಿವಪೂಜೆ, ಕನ್ನಡ ಪರ ಹೋರಾಟಗಾರರಾದ ಮನೋಜಕುಮಾರ ಸಿತಾಳೆ, ನಾಗಯ್ಯ ಸ್ವಾಮಿ ಹಳ್ಳಿಖೇಡ, ಶಂಕರ ಹಾಲಾ, ಪವನ್ ಗೊಂಡ, ಆಕಾಶ್ ಪವಿತ್ರ, ಅರುಣ್ ಕಲ್ಲೂರ, ರಾಜಶೇಖರ ರೆಡ್ಡಿ, ಪ್ರಮೋದ್ ಚಿದ್ರಿ, ಸಚ್ಚಿದಾನಂದ ಮಠಪತಿ, ನಿತಿನ್ ಬಿರಾದಾರ ಇದ್ದರು.