ಜಿಲ್ಲೆ

ಜಿಲ್ಲಾ ಉಪ್ಪಾರ ಸಮಾಜ ಸಂಘಕ್ಕೆ ಆಯ್ಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲಾ ಉಪ್ಪಾರ ಸಮಾಜ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ತಾನಾಜಿ ಸಗರ್ ತಿಳಿಸಿದ್ದಾರೆ.
ಪದಾಧಿಕಾರಿಗಳು: ಜಗನ್ನಾಥ ಎಚ್. ಉಪ್ಪಾರ, ನರಸಿಂಗ್ ಸಗರ್ (ಗೌರವಾಧ್ಯಕ್ಷರು), ಶಿವಾಜಿ ಸಗರ್, ಬಾಬುರಾವ್ ಪೀರಪ್ಪ ಶೆಟ್ಟೆ (ಕಾರ್ಯಾಧ್ಯಕ್ಷರು), ಅನಿಲಕುಮಾರ ಉಪ್ಪಾರ (ಉಪಾಧ್ಯಕ್ಷ), ಕಲ್ಲಪ್ಪ ಪಂಡರಿ (ಪ್ರಧಾನ ಕಾರ್ಯದರ್ಶಿ), ಜಗನ್ನಾಥ ಅಲಗೋಳ(ಕಾರ್ಯದರ್ಶಿ), ಜ್ಞಾನದೇವ ಸಗರ್ (ಜಂಟಿ ಕಾರ್ಯದರ್ಶಿ), ಶರಣಪ್ಪ ಶಂಕರ (ಖಜಾಂಚಿ), ಮಾಣಿಕರಾವ್ ವಡಲೂರೆ, ತುಕಾರಾಮ ನರಸಿಂಗ್, ಹಣಮಂತರಾವ್ ಲಾದೆಕರ್, ವಿಠ್ಠಲರಾವ್ ಮರ್ಕ್ (ಸಂಘಟನಾ ಸಲಹೆಗಾರರು), ಪರಶುರಾಮ ನರಸಿಂಗರಾವ್, ಸಂತೋಷ್ ಮನೋಹರರಾವ್ ಮತ್ತು ಸಾಗರ್ ಬಸಪ್ಪ (ಸದಸ್ಯರು).
ನಗರದಲ್ಲಿ ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 85 ಕ್ಕೂ ಅಧಿಕ ಅಂಕ ಗಳಿಸಿದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಆಗಸ್ಟ್ 25 ರಂದು ನಗರದಲ್ಲಿ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಆಯೋಜಿಸಲು ನಿರ್ಧರಿಸಲಾಯಿತು.
ಪ್ರತಿಭಾ ಪುರಸ್ಕಾರಕ್ಕೆ ಹೆಸರು ನೋಂದಣಿಗೆ ಸಮಾಜದ ವಿದ್ಯಾರ್ಥಿಗಳು ಮೊಬೈಲ್ ಸಂಖ್ಯೆ 8970497591 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉಪ್ಪಾರ ಸಮಾಜ ಸಂಘದ ಅಧ್ಯಕ್ಷ ತಾನಾಜಿ ಸಗರ್ ತಿಳಿಸಿದ್ದಾರೆ.