ಬೀದರ್: ಶ್ರಾವಣ ಮಾಸ ನಿಮಿತ್ತ ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿನ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಒಂದು ತಿಂಗಳು ನಡೆಯುವ ಪ್ರವಚನಕ್ಕೆ ಫೆ.5ರಂದು ಚಾಲನೆ ಸಿಗಲಿದೆ. ಸೆ. 3 ರವರೆಗೆ ನಿತ್ಯ ಸಂಜೆ 6ಕ್ಕೆ ಪೂಜ್ಯ ಮಹಾಲಿಂಗ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ.
ಕರಪತ್ರ ಬಿಡುಗಡೆ: ನಗರದಲ್ಲಿ ಶುಕ್ರವಾರ ಬಸವ ದರ್ಶನ ಪ್ರವಚನ ಕರಪತ್ರಗಳ ಬಿಡುಗಡೆಗೊಳಿಸಲಾಯಿತು. ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು. ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ.ಎಸ್.ಬಿ. ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಹಾಲಿಂಗಪ್ಪ ಬೆಲ್ದಾಳೆ, ಜೈರಾಜ ಖಂಡ್ರೆ, ಲಿಂಗಶೆಟ್ಟಿ ಬಿರಾದಾರ್, ಭೀಮಾಶಂಕರ ಬಿರಾದಾರ್, ವಿಜಯಕುಮಾರ ಪಾಟೀಲ್ ಯರನಳ್ಳಿ ಇತರರಿದರು. ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಉಮಾಕಾಂತ ಮೀಸೆ ಸ್ವಾಗತಿಸಿ, ನಿರೂಪಣೆ ಮಾಡಿದರು. ಶ್ರೀಕಾಂತ ಬಿರಾದಾರ್ ವಂದಿಸಿದರು.