ಬಸವಕಲ್ಯಾಣ: ಇಲ್ಲಿನ ಅನುಭವ ಮಂಟಪದಲ್ಲಿ ನಾಡೋಜ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಮಾರ್ಗದರ್ಶನದಲ್ಲಿ ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಅವರಿಂದ ಆ.5ರಿಂದ ಸೆ.3ರವರೆಗೆ ನಡೆಯಲಿರುವ ಅಮರಗಣಂಗಳ ಆತ್ಮಚರಿತ್ರೆ ಪ್ರವಚನದ ಕರಪತ್ರವನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ (ಬಿಕೆಡಿಬಿ)ಮಂಡಳಿ ಆಯುಕ್ತ ರಮೇಶ ಕೋಲಾರ ಬಿಡುಗಡೆಗೊಳಿಸಿದರು.
ಒಂದು ತಿಂಗಳು ನಡೆಯಲಿರುವ ಪ್ರವಚನವನ್ನು ಈ ಭಾಗದ ಬಸವ ಭಕ್ತರು ಆಲಿಸಿ, ಶರಣರ ಸಾರಿದ ಸಂದೇಶವನ್ನು ತಿಳಿದುಕೊಳ್ಳಬೇಕು ಎಂದು ಶಿವಾನಂದ ಶ್ರೀ ಹೇಳಿದರು.
ಅನುಭವ ಮಂಟಪ ಟ್ರಸ್ಟ್ ಉಪಾಧ್ಯಕ್ಷ ವೈಜಿನಾಥ ಕಾಮಶೆಟ್ಟಿ, ಕಾರ್ಯದರ್ಶಿ ಎಸ್.ಬಿ. ದುರ್ಗೆ, ಶ್ರಾವಣ ಮಾಸದ ಪ್ರವಚನ ಸೇವಾ ಸಮಿತಿ ಅಧ್ಯಕ್ಷ ರಾಜಕುಮಾರ ರಟಕಲೆ, ಚಂದ್ರಪ್ಪ ಗುಂಗೆ, ಲಕ್ಷ್ಮಣ ತೊಗಲೂರು, ಗಂಗಾಧರ ಬಿರಾದಾರ್, ಶಂಕರ ಮದರಗೆ, ಸಚಿನ್ ಕೌಟೆ ಇತರರಿದ್ದರು.