ಬೀದರ್: ತಾಲ್ಲೂಕಿನ ಅಲಿಯಂಬರ್ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಸಂತೋಷ್ ಪಡಸಲೆ ಪುನರಾಯ್ಕೆಯಾಗಿದ್ದಾರೆ.
ಶಾಲೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ಹೆಸರು ಇಂತಿವೆ. ಪದ್ಮಾವತಿ ಉಮೇಶ(ಉಪಾಧ್ಯಕ್ಷೆ), ಸುನೀಲ್ ಬಾಬಶೆಟ್ಟೆ, ಜ್ಯೋತಿ ಮರಕಲೆ, ಗೀತಾ ರಿಕ್ಕೆ, ದತ್ತಾತ್ರಿ ಲಸ್ಕರೆ, ಯಾಸಿಮಿನ್ ಬೇಗಂ, ಹುಲೆಪ್ಪ ಮೈಲೂರೆ, ಸುರೇಶ ಮಾಳೆ, ಸಂಜುಕುಮಾರ ರಾಯಗುಂಡೆ, ಮೇಘಾವತಿ ಕೋಳಿ, ಸಂತೋಷ್ ದಶರಥ, ಅನಿಲ್ ವೈಜಿನಾಥ, ಅನಿತಾ ಮುಗನೂರೆ, ಮಹಾನಂದ ಹಣಮಂತ ಮತ್ತು ಸವಿತಾ ಪರಶುರಾಮ (ಸದಸ್ಯರು).
ಗ್ರಾಮಸ್ಥರು ಸಮಿತಿಯ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿದರು.
ಯುವ ಮುಖಂಡ ಸಿದ್ದೊಬಾ ಲೌಟೆ, ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ ಮುಗನೂರೆ, ಹುಲೆಪ್ಪ ಘೋಡಂಪಳ್ಳೆ, ಪ್ರಮುಖರಾದ ಅಶೋಕ ಢೋಣೆ, ಅಶೋಕ ಸಂತಪುರೆ, ನೋಹನ್ ಮುಗನೂರೆ, ಸತೀಶ್ ಮುದಾಳೆ, ಗೋರಕ ಕೋಳಿ, ಇಮ್ಯಾನುವೆಲ್ ಮುಗನೂರೆ, ಆಗಸ್ಟಿನ್ ಮುಗನೂರೆ, ಶಿವಕುಮಾರ ಹಾಲಕೊಡೆ, ಉಮೇಶ ಒಡೆಯರ್, ಸುನೀಲ್ ಒಡೆಯರ ಮತ್ತಿತರರು ಇದ್ದರು.