ಜಿಲ್ಲೆ

ಸಾಹಿತ್ಯ ಕ್ಷೇತ್ರಕ್ಕೆ ಬಡಿಗೇರ್ ಕೊಡುಗೆ ಅಪಾರ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಭೀಮಸೇನ್ ಬಡಿಗೇರ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ, ಸಾಹಿತ್ಯ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಹೇಳಿದರು.
ಮೌನೇಶ್ವರ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಭೀಮಸೇನ ಬಡಿಗೇರ ಸಂಪಾದಕತ್ವದ ವಿ.ಜಿ. ದೀಕ್ಷಿತ್ ಸಮಗ್ರ ಸಾಹಿತ್ಯ ಸಂಪುಟ 1, ಬೆಳ್ಳಿ ಬೆಳಕು ಹಾಗೂ ಅಕ್ಕಸಾಲಿಕೆ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತ್ಯ ಓದುವ ಹವ್ಯಾಸವನ್ನು ಇಂದಿನ ಯುವ ಸಮೂಹ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಹಿತಿ ಭೀಮಸೇನ್ ಬಡಿಗೇರ್ ಮಾತನಾಡಿದರು. ವಿಶ್ವಕರ್ಮ ಧರ್ಮ ವರ್ಧಿನಿ ಸಂಘದ ಅಧ್ಯಕ್ಷ ಶ್ರೀನಿವಾಸ್ ವಿಶ್ವಕರ್ಮ ಉದ್ಘಾಟಿಸಿದರು. ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಹೇಶ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ವಿಶ್ವಕರ್ಮ ಶಿವಾನಂದ ಎಸ್., ಭೀಮೇಶಾ ಬಡಿಗೇರ್, ರವೀಂದ್ರ ಲಂಜವಾಡಕರ್, ಚಂದ್ರಕಲಾ ವಿಶ್ವಕರ್ಮ, ಸಿದ್ಧಾರೂಢ ವಿಶ್ವಕರ್ಮ, ಪಾಂಡುರಂಗ ಪಾಂಚಾಳ, ವಿನಯಕುಮಾರ, ಬಾಬುರಾವ ಚಿಮಕೋಡ, ಅರವಿಂದ ವಿಶ್ವಕರ್ಮ, ಬಾಬುರಾವ ವಿಶ್ವಕರ್ಮ, ಶಾಮರಾವ ವಿಶ್ವಕರ್ಮ, ನಾರಾಯಣ ವಿಶ್ವಕರ್ಮ, ಈರಣ್ಣ, ವೈಜಿನಾಥ, ರಮೇಶ, ಪಾಂಡುರಂಗ ಪಾಂಚಾಳ, ನೆಹರು, ಏಕನಾಥ, ಸಂಜುಕುಮಾರ, ಸುನೀಲ, ರಾಘವೇಂದ್ರ, ರಘುನಾಥ, ಸದಾನಂದ, ಸುಲೋಚನಾ ಗುರುನಾಥ, ಶ್ರೀದೇವಿ, ಸವಿತಾ ಇತರರಿದ್ದರು.
ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ, ವಿಶ್ವಕರ್ಮ ಮೌನೇಶ್ವರ ದೇವಸ್ಥಾನ ಸಮಿತಿ, ವಿಶ್ವಕರ್ಮ ಧರ್ಮ ವರ್ಧಿನಿ ಸಂಘ ಹಾಗೂ ಕಾಳಿಕಾದೇವಿ ದೇವಸ್ಥಾನ ಸಮಿತಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.