ಭಾಲ್ಕಿ: ಪಟ್ಟಣಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆತ್ಮಹತ್ಯೆ, ಹಾವು ಕಡಿತ ಮತ್ತು ಬಣವಿಗೆ ಬೆಂಕಿ ಬಿದ್ದು ನಷ್ಟ ಅನುಭವಿಸಿದ ಸಂತ್ರಸ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು 32.40 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿ ಸಾಂತ್ವನ ಹೇಳಿದರು.
ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಶಮಶೇಪುರ ವಾಡಿಯ ಗಣಪತರಾವ, ಸಾಯಿಗಾಂವದ ಮಾರುತಿ, ಕೇಸರ ಜವಳಗಾದ ಸತೀಶ್ ಬೋರಾಳೆ, ಮೇಥಿಮೇಳಕುಂದಾದ ಮನೋಹರ, ಚಿಕಲಚಂದಾದ ರಮೇಶ ಅವರ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರೂ., ಹಾವು ಕಡಿತದಿಂದ ಮೃತಪಟ್ಟಿದ್ದ ಬಾಳೂರ ಮಹಿಳೆ ಪರಿವಾರದವರಿಗೆ 2 ಲಕ್ಷ ರೂ. ಮತ್ತು ಬಣವಿ ನಷ್ಟ ಅನುಭವಿಸಿದ ಭಾತಂಬ್ರಾದ ಜಗನ್ನಾಥ ಕಲ್ಲಪ್ಪ, ತೇಲಗಾಂವದ ಅಭಂಗರಾವ ಸಂಗ್ರಾಮ ಕುಟುಂಬ ಸದಸ್ಯರಿಗೆ ತಲಾ 20 ಸಾವಿರ ರೂ. ಚೆಕ್ ವಿತರಿಸಲಾಯಿತು.