ಜಿಲ್ಲೆ

ಬಿಜೆಪಿ ನಗರ ಮಂಡಲಕ್ಕೆ ನೇಮಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬಿಜೆಪಿ ಬೀದರ್ ನಗರ ಮಂಡಲಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಅನುಮೋದನೆ ಮೇರೆಗೆ ನೇಮಕ ಮಾಡಲಾಗಿದೆ. ಎಲ್ಲ ಪದಾಧಿಕಾರಿಗಳು ತಕ್ಷಣ ಜವಾಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸಬೇಕು ನಗರ ಘಟಕ ಅಧ್ಯಕ್ಷ ಶಶಿಧರ ಹೊಸಳ್ಳಿ ತಿಳಿಸಿದ್ದಾರೆ.
ಕೈಲಾಶ ಕಾಜಿ, ನವೀನ್ ಚಿಟ್ಟಾ, ರೋಶನ್ ವರ್ಮಾ, ಸಂಜುಕುಮಾರ ಪಾಟೀಲ್, ನರೇಶ ಗೌಳಿ, ನಿತೀನ್ ನವಲಕಲೆ, ಸರಸ್ವತಿ ಹಣಮಶೆಟ್ಟಿ (ಉಪಾಧ್ಯಕ್ಷರು), ಗಣೇಶ ಭೋಸ್ಲೆ, ಸುನೀಲ ಗೌಳಿ (ಪ್ರಧಾನ ಕಾರ್ಯದರ್ಶಿ), ದೀಪಕ ಠಾಕೂರ್, ಪವನ್ ಉಂಡೆ, ವಿಜಯಕುಮಾರ ಹೆಗ್ಗೆ, ಸಿ.ಆನಂದ ಘಂಟೆ, ಸಂಗಮೇಶ ಮೋರ್ಗೆ, ಜಯಶ್ರೀ ಕಡಾದೆ (ಕಾರ್ಯದರ್ಶಿ), ರಾಜಕುಮಾರ ಜಮಾದಾರ (ಕೋಶಾಧ್ಯಕ್ಷ), ಸಂಗಮೇಶ ಗುಮ್ಮಾ (ಮಾಧ್ಯಮ ಪ್ರಮುಖ) ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.