ಬೀದರ್: 2024-25ನೇ ಸಾಲಿನ ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ ಆರೋಪಿಸಿದ್ದಾರೆ.
ರಾಜ್ಯದ ತೆರಿಗೆ ಹಣ ಅಭಿವೃದ್ಧಿಗೆ ಮರಳಿ ಕೊಡುವುದು ಸೇರಿದಂತೆ 10 ವರ್ಷಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಬಂದಿದೆ. ಈ ಬಾರಿಯೂ ಮಲತಾಯಿ ಧೋರಣೆ ಮುಂದುವರಿಸಿದೆ ಎಂದು ಟೀಕಿಸಿದ್ದಾರೆ.
ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ವಿಶೇಷ ಯೋಜನೆಗಳನ್ನು ಘೋಷಿಸಿಲ್ಲ. ಜನಸಾಮಾನ್ಯರು, ಮಹಿಳೆಯರು, ಯುವಕರು ಸೇರಿದಂತೆ ವಿವಿಧ ವರ್ಗಗಳಿಗೆ ಅನುಕೂವಾಗುವ ಅಂಶಗಳಿಲ್ಲ. ಜೆಡಿಯು ಹಾಗೂ ಡಿಟಿಪಿ ಕೇಂದ್ರದಲ್ಲಿ ಕೇಂದ್ರದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆಗೆ ನೆರವಾದ ಕಾರಣ ಬಿಹಾರ ಹಾಗೂ ಆಂಧ್ರಪ್ರದೇಶಗಳಿಗೆ ಅನುದಾನದ ಹೊಳೆ ಹರಿಸಲಾಗಿದೆ. ದೇಶದ ಹಿತಕ್ಕಿಂತ ಹೇಗಾದರೂ ಮಾಡಿ ಐದು ವರ್ಷಗಳ ಅಧಿಕಾರ ಪೂರ್ಣಗೊಳಿಸುವ ಗುರಿ ಬಿಜೆಪಿಯದ್ದಾಗಿದೆ ಎಂದು ಟೀಕಿಸಿದ್ದಾರೆ.