ಜಿಲ್ಲೆ

ಅಭಿವೃದ್ಧಿಗೆ ಉತ್ತೇಜನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬೆಂಗಳೂರು-ಹೈದಾರಾಬಾದ್ ಕೈಗಾರಿಕಾ ಕಾರಿಡಾರ್ ಯೋಜನೆ ಘೋಷಿಸಿರುವುದು ಹೈದರಾಬಾದ್ ಸಮೀಪದ ಬೀದರ್ ಜಿಲ್ಲೆಗೂ ಸಾಕಷ್ಟು ನೆರವಾಗಲಿದೆ ಎಂದು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಹೇಳಿದ್ದಾರೆ.
ನಮ್ಮ ಭಾಗದ ಅಭಿವೃದ್ಧಿಗೂ ಇದು ಉತ್ತೇಜನ ನೀಡಲಿದೆ. ಆದಾಯ ತೆರಿಗೆ ನೀತಿಯಲ್ಲಿ ಸಾಕಷ್ಟು ಬದಲಾವಣೆ ತರುವ ಜತೆಗೆ ತೆರಿಗೆ ಪದ್ಧತಿ ಮತ್ತಷ್ಟು ಸರಳೀಕರಣಕ್ಕೆ ಆದ್ಯತೆ ನೀಡಿದ್ದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ.