ಜಿಲ್ಲೆ

ಹೊರೆರಹಿತ ಆಯವ್ಯಯ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಯಾರಿಗೂ ಹೊರೆಯಾಗದಂಥ ಅಭಿವೃದ್ಧಿ ಮತ್ತು ಜನಸಾಮಾನ್ಯರ ಪರವಾದ ಕೇಂದ್ರದ ಬಜೆಟ್ ಮಂಡಿಸಲಾಗಿದೆ ಎಂದು ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ನಿರ್ದೇಶಕ ವಿಜಯಕುಮಾರ ಪಾಟೀಲ್ ಗಾದಗಿ ತಿಳಿಸಿದ್ದಾರೆ.
ಮೂರು ಕ್ಯಾನ್ಸರ್ ಔಷಧಗಳ ತೆರಿಗೆ ರದ್ದುಪಡಿಸಿ ರೋಗಿಗಳ ಹಿತ ಕಾಪಾಡಲಾಗಿದೆ. ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್ 2047ರಲ್ಲಿ ವಿಕಸಿತ ಭಾರತ ನಿರ್ಮಾಣದ ಕನಸು ನನಸುಗೊಳಿಸುವುದಕ್ಕೆ ಮುನ್ನುಡಿ ಬರೆಯುವ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.