ಬೀದರ್: ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಬಹಳ ಶ್ರೇಷ್ಠವಾಗಿದೆ ಎಂದು ಪ್ರೊ. ಬಿ.ಜಿ. ಮೂಲಿಮನಿ ಫೌಂಡೇಷನ್ ಅಧ್ಯಕ್ಷ ಶಿವಲಿಂಗಪ್ಪ ಜಲಾದೆ ನುಡಿದರು.
ನಗರದ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರು ಪೂರ್ಣಿಮೆ ನಿಮಿತ್ತ ಶನಿವಾರ ನಡೆದ ಗುರು ಪೂಜೆ ಉತ್ಸವದಲ್ಲಿ ಅವರು ಮಾತನಾಡಿದರು.
ಮುಂದೆ ಗುರಿ, ಹಿಂದೆ ಗುರು ಇರಬೇಕು. ಗುರುವಿನ ಮಾರ್ಗದರ್ಶನದಿಂದ ಎಲ್ಲವನ್ನೂ ಸಾಧ್ಯವಾಗಿಸಬಹುದು ಎಂದು ತಿಳಿಸಿದರು.
ವಿಕಾಸ ಅಕಾಡೆಮಿಯ ಜಿಲ್ಲಾ ಸಂಯೋಜಕ ಬಸವರಾಜ ಅಷ್ಟಗಿ ಮಾತನಾಡಿ, ಗುರುವಿನಿಂದಾಗಿಯೇ ಅನೇಕರು ಮಹತ್ವದ ಸಾಧನೆ ಮಾಡಿ ಇತಿಹಾಸ ರಚಿಸಿದ್ದಾರೆ. ಶಿವಾಜಿ ಮಹಾರಾಜ, ವೇದ ವ್ಯಾಸ, ಸ್ವಾಮಿ ವಿವೇಕಾನಂದ ಮೊದಲಾದವರು ಇದಕ್ಕೆ ಉದಾಹರಣೆಯಾಗಿದ್ದಾರೆ ಎಂದು ಹೇಳಿದರು.
ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಆರ್. ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಸತೀಶ್ ಚಿಮ್ಮಾ, ಅಮಿತಕುಮಾರ ಹಳೆಂಬರಕರ್, ರೇಣುಕಾ ಬ್ಯಾಗರೆ, ಜ್ಯೋತಿ ಖೇಣಿ, ಗಂಗಮ್ಮ, ಅಶ್ವಿನಿ ಸ್ವಾಮಿ, ಭಾರ್ಗವಿ ಅಷ್ಟಗಿ, ಶಾಸ್ತ್ರಿಬಾಯಿ, ಪುಷ್ಪಲತಾ, ರೇಣುಕಾ ಫುಲಾರಿ, ಪ್ರಿಯಾಂಕಾ, ಭಾಗ್ಯಶ್ರೀ, ವಿಜಯಲಕ್ಷ್ಮಿ ಇದ್ದರು.
ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ ನಿರೂಪಿಸಿದರು. ಪ್ರೌಢಶಾಲೆ ಮುಖ್ಯಶಿಕ್ಷಕ ರಾಹುಲ್ ಮೇತ್ರಸ್ಕರ್ ವಂದಿಸಿದರು.