ಬೀದರ್: ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಪರಮೇಶ್ವರ್ ಬಿರಾದಾರ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಸರಸ್ವತಿ ಶಾಲೆಯ ಗಿರಿಜಾ ಸಭಾ ಮಂಟಪದಲ್ಲಿ ಬುಧವಾರ ನಡೆದ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಲ್ಲಿ ವಿಜಯಕುಮಾರ ಪಾಟೀಲ ಯರನಳ್ಳಿ (ಗೌರವಾಧ್ಯಕ್ಷ), ರಮೇಶ ಪಾಟೀಲ (ಪ್ರಧಾನ ಕಾರ್ಯದರ್ಶಿ) ಹಾಗೂ ಸಂತೋಷ್ ಮಂಗಳೂರೆ (ಖಜಾಂಚಿ) ಸೇರಿದ್ದಾರೆ.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ ಬಸರಕೋಡ ಮಾತನಾಡಿ, ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು ಶಿಕ್ಷಕರ ಹಿತ ರಕ್ಷಣೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜಶೇಖರ ಮಂಗಲಗಿ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜುಕುಮಾರ ಪಾಟೀಲ, ಹಿರಿಯ ಸದಸ್ಯ ಬಸವರಾಜ ಸ್ವಾಮಿ, ಶಾಲಿವಾನ್ ಗಂದಗೆ, ಪ್ರತಿಭಾ ಚಾಮಾ, ಪ್ರಶಾಂತ ರಾಗಾ, ಮಲ್ಲಯ್ಯ ಸ್ವಾಮಿ, ಗಣೇಶ ಬಿರಾದಾರ, ದೇವಿಪ್ರಸಾದ್ ಕಲಾಲ್, ದಾನಿ ಬಾಬುರಾವ್, ಶಿವಲಿಂಗ ಬಿರಾದಾರ, ಆನಂದ ಜಾಧವ್, ಯಶವಂತರಾವ್ ಬಾಡೋಳೆ ಮತ್ತಿತರರು ಇದ್ದರು. ಉಮಾಕಾಂತ ಮೀಸೆ ನಿರೂಪಿಸಿದರು. ಸಂಜೀವ ಸ್ವಾಮಿ ವಂದಿಸಿದರು.