ಬೀದರ್: ನಮ್ಮ ಕರ್ನಾಟಕ ಸೇನೆಯ ಬೀದರ್ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಗಣೇಶ್ ಪಾಟೀಲ ಜ್ಯಾಂತಿ ಅವರನ್ನು ನೇಮಕ ಮಾಡಲಾಗಿದೆ.
ಸೇನೆಯ ರಾಜ್ಯ ಅಧ್ಯಕ್ಷ ಎಂ. ಬಸವರಾಜ್ ಪಡಕೋಟೆ ಅವರ ಆದೇಶದ ಮೇರೆಗೆ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಾಖಾಪುರ ಈ ನೇಮಕ ಮಾಡಿದ್ದಾರೆ.
ನಗರದ ಹೋಟೆಲ್ ಮಯೂರಾ ಬರೀದ್ ಶಾಹಿಯಲ್ಲಿ ನಡೆದ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸೇನೆಯ ನೂತನ ಜಿಲ್ಲಾ ಅಧ್ಯಕ್ಷ ಗಣೇಶ್ ಪಾಟೀಲ ಅವರು, ಸೇನೆಯ ಜಿಲ್ಲಾ ಅಧ್ಯಕ್ಷನನ್ನಾಗಿ ನೇಮಕ ಮಾಡಿರುವುದು ಸಂತಸ ಉಂಟು ಮಾಡಿದೆ. ಕನ್ನಡ ತಾಯಿಯ ಸೇವೆಗೆ ಇನ್ನಷ್ಟು ಬಲ ನೀಡಿದೆ ಎಂದು ಹೇಳಿದರು.
ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವೆ. ಬರುವ ದಿನಗಳಲ್ಲಿಯೂ ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕøತಿ ಹಾಗೂ ಕನ್ನಡಿಗರ ಹಿತ ರಕ್ಷಣೆಗೆ ನಿರಂತರ ಶ್ರಮಿಸುವೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಾಖಾಪುರ ಮಾತನಾಡಿದರು. ರಾಜ್ಯ ಪದಾಧಿಕಾರಿಗಳಾದ ಎಸ್.ಎಂ. ಖಾದ್ರಿ, ನಬಿ ರಸೂಲಿ, ಶರಣಗೌಡ ಪಾಟೀಲ, ಸಿದ್ದು ಪಟ್ಟೆದಾರ್, ಜಿಲ್ಲೆಯ ಪದಾಧಿಕಾರಿಗಳಾದ ಸಂಗಮೇಶ್ ಮೂಲಗೆ, ಸಂಜು ಯಾದವ್, ರಾಜು ಪಾಟೀಲ ಖಾನಾಪುರ, ಸಂತೋಷ್ ಪಾಟೀಲ ಜ್ಯಾಂತಿ, ಸುಧಾಕರ್ ರಾಠೋಡ್, ದಿಲೀಪ್ ದೊಡ್ಡಮನಿ, ಗಿರೀಶ್ ಬಿರಾದಾರ, ಅನಿಲ್ ರಾಜಗೀರಾ, ಸುದೀಪ್ ತೂಗಾವೆ, ಕಾಶಿನಾಥ್ ಚಳಕಾಪೂರ, ಪದ್ಮಾಕರ್ ಯಾದವ್, ಅಜೀಮ್ ಪಟೇಲ್, ಸೋಮನಾಥ್ ಜಾಜೆ, ಜಗದೀಶ್ ಬಿರಾದಾರ, ಪವನ್, ಸಂತೋಷ್ ನಾಯಕ್ ಇದ್ದರು.