ಜಿಲ್ಲೆ

ಹೆಚ್ಚೆಚ್ಚು ಸಸಿ ನೆಟ್ಟು ಪಾಲನೆ ಮಾಡಿ

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ಮನೆಗೊಂದು ಮರ, ಊರಿಗೊಂದು ಕೆರೆ ಎಂಬ ತತ್ವ ಪಾಲಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಪಾಲನೆ ಮಾಡಿದರೆ ಸಕಾಲಕ್ಕೆ ಮಳೆಯಾಗಲಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸೂರ್ಯಕಾಂತ ಬಿರಾದಾರ್ ಹೇಳಿದರು.
ತಾಪಂ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವನಮಹೋತ್ಸವ ಮತ್ತು ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಪರಿಸರದಿಂದ ನಮಗೆ ಆಮ್ಲಜನಕ ದೊರೆಯುತ್ತದೆ. ಪರಿಸರ ಉಳಿದರೆ ಮಾತ್ರ ನಾವು ಬದುಕಲು ಸಾಧ್ಯ. ಜಾಗತೀಕರಣ ಭರಾಟೆಯಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡುತ್ತಿದ್ದಾನೆ. ಇದರಿಂದ ತಾಪಮಾನ ಹೆಚ್ಚಾಗಿ ಗಂಭೀರ ಸಮಸ್ಯೆ ತಲೆದೋರಲಿದೆ. ಇದಕ್ಕೆ ಅವಕಾಶ ನೀಡದಿರಲು ಹೆಚ್ಚೆಚ್ಚು ಸಸಿ ನೆಟ್ಟು ಪೋಷಿಸಬೇಕು ಎಂದರು.
ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ವ್ಯವಸ್ಥಾಪಕ ವಿನೋದರಡ್ಡಿ, ವಸತಿ ನೋಡಲ್ ಅಧಿಕಾರಿ ಶಿವರಾಜ ಮೂಲಗೆ, ಯುವರಾಜ, ನದಾಫ್, ಚೇತನ್ ಓಣಿ, ಅಮರ ಲಕಶೆಟ್ಟೆ, ಸುನೀಲ ಮಲಗೆ, ಹೇಮಲತಾ, ಪ್ರಭು ಮೇತ್ರೆ, ಬಸವರಾಜ, ನಾಮದೇವ ಇತರರಿದ್ದರು.