ಬೀದರ್: ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ ಅವರ ಜನ್ಮದಿನದ ಅಂಗವಾಗಿ ನಗರದ ಮಹಾತ್ಮ ಜ್ಯೋತಿಬಾ ಫುಲೆ ಹಿರಿಯ ನಾಗರಿಕರ ಕೇಂದ್ರದಲ್ಲಿ ಶುಕ್ರವಾರ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು, ಬಿಸ್ಕತ್ ವಿತರಿಸಲಾಯಿತು.
ತಮ್ಮ ಜನ್ಮದಿನದ ಅಂಗವಾಗಿ ಸೂರ್ಯಕಾಂತ ರಾಮಶೆಟ್ಟಿ ಅವರು ರೋಟರಿ ಫೌಂಡೇಷನ್‍ಗೆ ದೇಣಿಗೆ ನೀಡಿದರು. ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಶಿವಕುಮಾರ ಪಾಖಾಲ್, ನಿಕಟಪೂರ್ವ ಅಧ್ಯಕ್ಷ ಡಾ. ಕಪಿಲ್ ಪಾಟೀಲ, ಕ್ಲಬ್‍ನ ಡಾ. ರಿತೇಶ ಸುಲೆಗಾಂವ್, ಡಾ. ಶ್ರೀಕಾಂತ ರೆಡ್ಡಿ ಬೋಗಲೆ, ರಾಮಕೃಷ್ಣ ಆರ್ಕೆ, ಶಾಂತಕುಮಾರ ಬಿರಾದಾರ, ವಾರದ್ ರಾಮಶೆಟ್ಟಿ, ಮಾನ್ವಿತಾ ರಾಮಶೆಟ್ಟಿ ಇದ್ದರು.