ಬೀದರ್: ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರ ದಿಢೀರ್ ಆಗಿ ವರ್ಗಾವಣೆಯಾಗಿದೆ. ಇಲ್ಲಿಗೆ ಜಿಲ್ಲಾಧಿಕಾರಿಯನ್ನಾಗಿ ಶಿಲ್ಪಾ ಶರ್ಮಾ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಗೋವಿಂದರಡ್ಡಿ ಅವರಿಗೆ ಗದಗ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿ. ವ್ಯವಸ್ಥಾಪಕ ನಿರ್ದೇಶಕಿ ಹುದ್ದೆಯಲ್ಲಿದ್ದ ಶಿಲ್ಪಾ ಅವರನ್ನು ಇಲ್ಲಿನ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಎರಡು ದಿನಗಳ ಹಿಂದಷ್ಟೇ ಬೀದರ್ ಎಸ್.ಪಿ ಚನ್ನಬಸವಣ್ಣ ಲಂಗೋಟಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಡಿಸಿ ಗೋವಿಂದರಡ್ಡಿ ಅವರನ್ನು ಸಹ ವರ್ಗ ಮಾಡಲಾಗಿದೆ.