ಜಿಲ್ಲೆ

ನಿರುದ್ಯೋಗಿಗಳಿಗೆ ಉಚಿತ ಕೌಶಲ ತರಬೇತಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿಯ ಗುಂಪಾ ರಸ್ತೆಯಲ್ಲಿ ಇರುವ ಕೈಲಾಶ್ ಶೋರೂಂ ಎದುರುಗಡೆಯ ಸಂಸ್ಕೃತಿ ಸ್ಕಿಲ್ ಸೆಂಟರ್ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉಚಿತ ಕೌಶಲ ತರಬೇತಿ ಶಿಬಿರ ಹಮ್ಮಿಕೊಳ್ಳಲು ನಿರ್ಧರಿಸಿದೆ.
18 ರಿಂದ 38 ವರ್ಷದ ಒಳಗಿನ ನಿರುದ್ಯೋಗಿ ಅಭ್ಯರ್ಥಿಗಳಿಗೆ ನೌಕರಿ ದೊರಕಿಸಿಕೊಡಲು ನೆರವಾಗುವ ಉದ್ದೇಶದಿಂದ ಕೌಶಲ ತರಬೇತಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸೆಂಟರ್‍ನ ಮುಖ್ಯಸ್ಥ ಶರಣು ಕೋಟೆ ತಿಳಿಸಿದ್ದಾರೆ.
ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ, ಸಂವಹನ ಕಲೆ, ಜೀವನ ಕೌಶಲ ಹಾಗೂ ಮೌಲ್ಯಗಳನ್ನು ಕಲಿಸಿಕೊಡಲಾಗುವುದು ಎಂದು ಹೇಳಿದ್ದಾರೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಪಾಸಾದ ಅಭ್ಯರ್ಥಿಗಳು ಹೆಸರು ನೋಂದಣಿಗೆ ಸಂಸ್ಕೃತಿ ಸ್ಕಿಲ್ ಡೆವಲೆಪ್‍ಮೆಂಟ್ ಸೆಂಟರ್‍ಗೆ ಖುದ್ದಾಗಿ ಭೇಟಿ ನೀಡಬಹುದು. ಇಲ್ಲವೇ ಮೊಬೈಲ್ ಸಂಖ್ಯೆ 9901112533 ಅಥವಾ 9353997677ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.