filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರೇವಣಸಿದ್ದಪ್ಪ ಪಾಟೀಲ್

ಕಮಲನಗರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕ ಪ್ರಭು ಚವ್ಹಾಣ್ ಸಂಚರಿಸಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.
ಬಳತ್(ಬಿ)ನಲ್ಲಿ 3 ಕೋಟಿ ರೂ. ರಸ್ತೆ ಕಾಮಗಾರಿ, ಹಾಲಳ್ಳಿಯಲ್ಲಿ 1.10 ಕೋಟಿ ರೂ. ಪ್ರಾಥಮಿಕ ಶಾಲಾ ಕಟ್ಟಡ, ಬೋರಾಳದಲ್ಲಿ 80 ಲಕ್ಷದ ಶಾಲಾ ಕಟ್ಟಡ, ಕಿರಗುಣವಾಡಿಯಲ್ಲಿ 22.50 ಲಕ್ಷದ ಅಂಗನವಾಡಿ, ಬಳತ್(ಕೆ)ನಲ್ಲಿ 22.50 ಲಕ್ಷದ ಅಂಗನವಾಡಿ, ಎಕಲಾರ ಸಕರ್ಾರಿ ಪ್ರೌಢಶಾಲೆಯಲ್ಲಿ 12.27 ಲಕ್ಷದ ಸೋಲಾರ್ ಪ್ಯಾನಲ್ ಹಾಗೂ 4 ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ, ಕೊಳ್ಳುರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10.80 ಲಕ್ಷದ ಸೋಲಾರ್ ಪ್ಯಾನಲ್ ಮತ್ತು 4 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ, 9.30 ಲಕ್ಷದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ ಅವರು, ಹಾಲಹಳ್ಳಿ, ಹಿಪ್ಪಳಗಾಂವ, ಎಕಲಾರಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಉದ್ಘಾಟಿಸಿದರು.
ಠಾಣಾಕುಶನೂರದಲ್ಲಿ 2 ಕೋಟಿ ವೆಚ್ಚದ ಕರ್ನಾಟಕ ಪಬ್ಲಿಕ್ ಶಾಲೆ, ಒಂದು ಕೋಟಿ ರೂ.ಗಳಲ್ಲಿ ಮಾಧ್ಯಮಿಕ ಶಾಲೆ ಕಟ್ಟಡ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮತ್ತು ಕೆಲವುಗಳನ್ನು ಉದ್ಘಾಟಿಸಿದ ಅವರು, ಎಲ್ಲ ಹಳ್ಳಿಗಳಲ್ಲಿ ರಸ್ತೆ, ಕುಡಿಯುವ ನೀರು, ಉತ್ತಮ ಶಾಲೆ, ಅಂಗನವಾಡಿ ಕೇಂದ್ರಗಳಿರಬೇಕು ಎಂಬ ಉದ್ದೇಶದಿಂದ ಕಾರ್ಯಪ್ರವೃತ್ತನಾಗಿದ್ದೇನೆ. ಅದರಂತೆ ಜನರ ಬೇಡಿಕೆಗೆ ಅನುಗುಣ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳುತ್ತಿದ್ದೇನೆ. ಕ್ಷೇತ್ರದ ಸರ್ವತೋಮುಖ ಪ್ರಗತಿಯೇ ನನ್ನ ಆದ್ಯತೆ ಎಂದರು.
ಶಿಕ್ಷಣ ಕ್ಷೇತ್ರದ ವಿಕಾಸಕ್ಕೆ ಒತ್ತು ಕೊಟ್ಟಿದ್ದು, ಎಲ್ಲ ಶಾಲೆಗಳಲ್ಲಿ ಉತ್ತಮ ಕಟ್ಟಡ, ಕುಡಿಯುವ ನೀರು, ಶೌಚಗೃಹ, ಆಟದ ಮೈದಾನ ಇರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೊರತೆಯಿರುವ ಕಡೆ ಅಗತ್ಯ ಅನುದಾನ ಒದಗಿಸಲಾಗುತ್ತಿದೆ. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸೋಲಾರ್ ಪ್ಯಾನಲ್ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಎಲ್ಲ ವರ್ಗದ ಮಕ್ಕಳು ಪ್ರವೇಶ ಪಡೆಯುತ್ತಾರೆ. ಅವರಿಗೆ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಸಿಗಬೇಕು. ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆಯುವಂತಾಗಬೇಕು. ಫಲಿತಾಂಶ ಸುಧಾರಣೆಗೆ ಶಿಕ್ಷಕರು ಒತ್ತು ನೀಡಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಗ್ರಾಪಂ ಅಧ್ಯಕ್ಷ ಕಾಶೀನಾಥ ಜೀರ್ಗೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಸುರೇಶ ಭೋಸ್ಲೆ, ಉದಯ ಸೋಲಾಪುರೆ, ಗಿರೀಶ್ ವಡೆಯರ್, ಶಿವರಾಜ ಅಲ್ಮಾಜೆ, ಬಾಬುರಾವ ವಾಗ್ಮಾರೆ, ಧನರಾಜ ಒಡೆಯರ್, ವೀರೇಂದ್ರ ರಾಜಾಪುರೆ, ಬಾಬುರಾವ ತೋರ್ಣಾವಾಡಿ, ಸೂರ್ಯಕಾಂತ ಅಲ್ಮಾಜೆ ಇತರರಿದ್ದರು.