ಜಿಲ್ಲೆ

ಸೂರ್ಯಕಾಂತ ರಾಮಶೆಟ್ಟಿ ರೋಟರಿ ಸಹಾಯಕ ಗವರ್ನರ್

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರದ ಸೂರ್ಯಕಾಂತ ರಾಮಶೆಟ್ಟಿ ರೋಟರಿ ಕಲ್ಯಾಣ ಝೋನ್ ನೂತನ ಸಹಾಯಕ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ.
ಅಂತರರಾಷ್ಟ್ರೀಯ ರೋಟರಿ ಕ್ಲಬ್ ವತಿಯಿಂದ ತೆಲಂಗಾಣದ ಕಡಪ ಜಿಲ್ಲೆಯ ಪ್ರೊಡ್ಡಟೂರ್‍ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅವರು ಅಧಿಕಾರ ಸ್ವೀಕರಿಸಿದರು.
ಸೂರ್ಯಕಾಂತ ರಾಮಶೆಟ್ಟಿ ಎರಡು ದಶಕಗಳಿಂದ ರೋಟರಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ, ಕಲ್ಯಾಣ ಝೋನ್ ವಲಯ ಕಾರ್ಯದರ್ಶಿಯಾಗಿ ಉತ್ತಮ ಕಾರ್ಯ ನಿರ್ವಹಿಸಿ ಗಮನ ಸೆಳೆದಿದ್ದಾರೆ.