filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 43; 
ಜಿಲ್ಲೆ

ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಇಂದಿರಾ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಡಾ.ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನದ ಆಶಯಗಳನ್ನು ಧಿಕ್ಕರಿಸಿ ನ್ಯಾಯಾಲಯದ ಆದೇಶಕ್ಕೂ ಗೌರವಿಸದೆ ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದು ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆರೋಪಿಸಿದರು.
ನಗರದಲ್ಲಿ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿ ಕರಾಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿರಾ ಗಾಂಧಿ ಸಂವಿಧಾನಕ್ಕೆ ಅವಮಾನಿಸುವ ಕೆಲಸ ಮಾಡಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಎಲ್ಲ ಭಾಷೆ, ಪರಂಪರೆ, ಸಂಸ್ಕೃತಿ, ಪ್ರಾಂತ-ಪಂಗಡಗಳನ್ನು ಒಗ್ಗೂಡಿಸಿಕೊಂಡು ಹೋಗಲು ಸಂವಿಧಾನದ ಮೂಲಕ ನೀಡಿದ್ದ ಜವಾಬ್ದಾರಿಯನ್ನು ಕಾರಣವಿಲ್ಲದೆ ತುರ್ತು ಪರಿಸ್ಥಿತಿ ಹೇರಿ ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕು ಕಸಿದುಕೊಂಡಿದ್ದು ಇಂದಿರಾ ಗಾಂಧಿ ಎಂದರು.
ಹಿರಿಯ ಚಿಂತಕ ಶಿವಶಂಕರ ತರನಳ್ಳಿ ಮಾತನಾಡಿ, 1971ರ ಚುನಾವಣೆಯಲ್ಲಿ ಇಂದಿರಾ ಗಾಂಧಿವಿರುದ್ಧ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ರಾಜ್ ನಾರಾಯಣ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೋಟ್೯ಗೆ ಹೋಗಿದ್ದರು. ಅಲಹಾಬಾದ್ ಹೈಕೋಟ್೯ ವಿಚಾರಣೆ ನಡೆಸಿ ಇಂದಿರಾ ಗಾಂಧಿ ಸಂಸತ್ ಸದಸ್ಯತ್ವ ರದ್ದು ಮಾಡಿತು. ಸುಪ್ರೀಂಕೋಟ್೯ ಸಹ ಈ ಆದೇಶ ಎತ್ತಿ ಹಿಡಿಯಿತು. ಆದರೆ ಅಧಿಕಾರ ಉಳಿಸಿಕೊಳ್ಳಲು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದರು ಎಂದು ಹೇಳಿದರು.
ತುರ್ತು ಪರಿಸ್ಥಿತಿಯಲ್ಲಿ ಬದುಕಿದ್ದೇ ನಮ್ಮ ಪುಣ್ಯ. ಹೋರಾಟ ಮಾಡಿದವರನ್ನು ಜೈಲಿಗೆ ಹಾಕಲಾಗುತ್ತಿತ್ತು. ನಾಗರಿಕರ ಮೇಲೆ ದಬ್ಬಾಳಿಕೆ ನಡೆಸಲಾಯಿತು. ತುರ್ತು ಪರಿಸ್ಥಿತಿ ಕರಾಳ ದಿನದ ಕುರಿತು ಇಂದಿನ ಮಕ್ಕಳು ಅರಿಯಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿದರು. ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮುಖಂಡರಾದ ಬಸವರಾಜ ಆರ್ಯ, ಈಶ್ವರಸಿಂಗ್ ಠಾಕೂರ್, ರಾಜಶೇಖರ ನಾಗಮೂರ್ತಿ, ಪೀರಪ್ಪ ಔರಾದೆ, ಕಿರಣ ಪಾಟೀಲ್, ಮಾಧವ ಹಾಸೂರೆ, ರಾಜೇಂದ್ರ ಪೂಜಾರಿ, ವೀರಣ್ಣ ಕಾರಬಾರಿ, ಅರವಿಂದ ಮುತ್ಯಾ, ಲುಂಬಿಣಿ ಗೌತಮ, ಗಣೇಶ ಭೋಸ್ಲೆ, ಸುಭಾಷ ಮಡಿವಾಳ ಇತರರಿದ್ದರು.
ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದ ಶಿವಶಂಕರ ತರನಳ್ಳಿ, ಮೋಹನರಾವ ಪಾಟೀಲ್, ಸುಭಾಷ ವಾಘಮಾರೆ, ಉದಯ ಪ್ರತಾಪಸಿಂಗ್, ಭೀಮಸಿಂಗ್ ಮಲ್ಕಾಪುರೆ, ಕಮಲಕಿಶೋರ ಅಟ್ಟಲ್ ಅವರನ್ನು ಸನ್ಮಾನಿಸಲಾಯಿತು.