ಬೀದರ್: ದೇಶದ ಏಕತೆ, ಅಖಂಡತೆಗೆ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಅವರಿಗಿದ್ದ ಪ್ರೇಮ, ಕಾಳಜಿ ಪ್ರತಿಯೊಬ್ಬ ಭಾರತೀಯನಿಗೆ ಮಾದರಿ ಎಂದು ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ ಹೇಳಿದರು.
ಮುಖರ್ಜಿ ಬಲಿದಾನ ದಿನ ನಿಮಿತ್ತ ನಗರದ ಕಪರ್ೂರ ಲೇಔಟ್ ನಲ್ಲಿರುವ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಉದ್ಯಾನವನದಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಮುಖರ್ಜಿ ಅವರ ಪ್ರತಿ ಕಾರ್ಯದಲ್ಲೂ ದೇಶಾಭಿಮಾನ ಎದ್ದು ಕಾಣುತ್ತಿತ್ತು. ದುಷ್ಟ ಶಕ್ತಿಗಳಿಂದ ದೇಶ ವಿಭಜಿಸುವ ಹುನ್ನಾರ ನಡೆದಾಗ ಪ್ರಬಲವಾಗಿ ವಿರೋಧಿಸುತ್ತ ಬಂದಿದ್ದರು ಎಂದರು.
ನಾನು ಈ ಹಿಂದೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧ್ಯಕ್ಷನಾಗಿದ್ದಾಗ ಈ ಉದ್ಯಾನವನದ ಹೆಸರು ಶ್ಯಾಮಾಪ್ರಸಾದ್ ಮುಖರ್ಜಿ ಎಂದು ನಾಮಕರಣ ಮಾಡಿ ಅವರ ಪುತ್ಥಳಿ ಅನಾವರಣಗೊಳಿಸಿದ್ದೆ. ಪ್ರತಿಯೊಬ್ಬರೂ ಮಹಾಪುರುಷರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭೆ ಮಾಜಿ ಸದಸ್ಯ ನಿತೀನ್ ಕರ್ಪೂರ, ನಾಗರಾಜ ಕರ್ಪೂರ ಇತರರಿದ್ದರು.