ಜಿಲ್ಲೆ

ಸಮಾನತೆಗಾಗಿ ಸಂಘರ್ಷ ದಿನಾಚರಣೆ 26ಕ್ಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯಿಂದ ಜೂ.26ರಂದು ಬೆಳಗ್ಗೆ 11.30ಕ್ಕೆ ಹುಮನಾಬಾದ್ನ ಟೀಚರ್ ಕಾಲನಿಯ ಡಾ.ಅಂಬೇಡ್ಕರ್ ಭವನದಲ್ಲಿ ಸಮಾನತೆಗಾಗಿ ಸಂಘರ್ಷ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಿತಿ ಹಿರಿಯ ಮುಖಂಡ, ಹುಮನಾಬಾದ್ ತಾಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಹೇಳಿದ್ದಾರೆ.
ನಗರದ ಡಾ.ಅಂಬೇಡ್ಕರ್ ವೃತ್ತದ ಹತ್ತಿರ ಸಮಾವೇಶದ ಪ್ರಚಾರ ಕುರಿತ ಪೋಸ್ಟರ್ ಬಿಡುಗಡೆ ಮಾಡಿದ ಅವರು, ಮೀಸಲಾತಿ ಜನಕರಾದ ಛತ್ರಪತಿ ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ದಸಂಸ ರಾಜ್ಯ ಸಂಸ್ಥಾಪಕರು, ದಲಿತ ಚಳವಳಿಯ ಮಹಾಚೇತನರಾದ ದಿ. ಪ್ರೊ.ಬಿ. ಕೃಷ್ಣಪ್ಪ ಜನ್ಮದಿನ ಹಾಗೂ ಶ್ರೇಷ್ಠ ಚಿಂತಕ ದಿ.ಡಾ.ಸಿದ್ಧಲಿಂಗಯ್ಯ ಅವರ ಮಹಾ ಪರಿನಿವರ್ಾಣ ದಿನಾಚರಣೆ ಏಕಕಾಲಕ್ಕೆ ಸಂಘಟಿಸಲಾಗಿದೆ. ಇದನ್ನು ಸಮಾನತೆಗಾಗಿ ಸಂಘರ್ಷ ದಿನದೊಂದಿಗೆ ಜಿಲ್ಲಾ ಮಟ್ಟದ ಸಮಾವೇಶವನ್ನಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ ಸಮಾವೇಶ ಉದ್ಘಾಟಿಸುವರು. ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ, ಸದಾನಂದ ಜೋಶಿ, ರುದ್ರಪ್ಪ ಹನಗವಾಡಿ, ಡಾ.ಅಪ್ಪಗೆರೆ ಸೋಮಶೇಖರ, ಡಾ.ಜಯದೇವಿ ಗಾಯಕವಾಡ, ಡಾ.ಪ್ರಕಾಶ ಪಾಟೀಲ್ ಇತರರು ಪಾಲ್ಗೊಳ್ಳುವರು. ಜಿಲ್ಲೆಯ ವಿವಿಧೆಡೆಯಿಂದ ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವರು ಎಂದು ಹೇಳಿದರು.
ಪ್ರಮುಖರಾದ ರಾಜಕುಮಾರ ಬನ್ನೇರ್, ರಂಜೀತಾ ಜೈನೂರೆ, ಬಸವರಾಜ ಸಾಗರ್, ಝರೆಪ್ಪ ರಾಂಪುರೆ, ಸುಧಾಕರ ಮಾಳಗೆ, ರಮೇಶ ಮಂದಕನಳ್ಳಿ, ಮಹಾದೇವ ಗಾಯಕವಾಡ, ಘಾಳೆಪ್ಪ ಮೈಲೂರೆ, ರವಿ ಗೌಂಡಿ, ಕೈಲಾಸ ಮೇಟಿ, ಮಾಣಿಕ ಮಾಡಗೂಳೆ, ಮಾರುತಿ ಜಗದಾಳೆ, ವಿಠ್ಠಲ್ ಲಾಡಕರ್, ತುಕಾರಾಮ ಲಾಡಕರ್ ಇತರರಿದ್ದರು.