ಔರಾದ್: ಗೋವಾದಲ್ಲಿ ಈಚೆಗೆ ನಡೆದ ಎಸ್.ವಿ. ಜೂನಿಯರ್ ಮಿಸ್ ಇಂಡಿಯಾ ರಾಷ್ಟ್ರ ಮಟ್ಟದ ಸ್ಪಧರ್ೆಯಲ್ಲಿ ಗಡಿ ಜಿಲ್ಲೆಯ ಗ್ರಾಮೀಣ ಪ್ರತಿಭೆ ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡಿದ್ದಾಳೆ.
ಎಕಂಬಾ ಗ್ರಾಮದ ಶಾವನಿ ಆತ್ಮರಾಮ ಪಾಟೀಲ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಗೆದ್ದು ಗಮನ ಸೆಳೆದಿದ್ದಾಳೆ. ಎರಡು ತಿಂಗಳ ಹಿಂದೆ ಮಿಸ್ ಇಂಡಿಯಾ ಸ್ಪರ್ಧೆಗಾಗಿ ಶಿವಾನಿ ಆನ್ಲೈನ್ ನೋಂದಣಿ ಮಾಡಿಸಿದ್ದಾರೆ. ಜೂ.10, 11ರಂದು ನಡೆದ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಭಾಗಿಯಾದವರನ್ನು ಹಿಂದಿಕ್ಕಿ ಶಿವಾನಿ ಮಿಸ್ ಇಂಡಿಯಾ ಪಟ್ಟ ಅಲಂಕರಿಸಿದ್ದಾರೆ. ಡಿಎಸ್ವಿ ಸಂಸ್ಥೆ ಸ್ಪರ್ಧೆ ಆಯೋಜಿಸಿತ್ತು. ಇದರಲ್ಲಿ ದೇಶದ ವಿವಿಧ 20 ರಾಜ್ಯದ ಪುಟ್ಟ ಮಕ್ಕಳು ಪಾಲ್ಗೊಂಡಿದ್ದರು.
10 ವರ್ಷದ ಶಾವನಿ ಪಾಟೀಲ್ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಪಾಲಕರು ಶಿಕ್ಷಣ ಜತೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಶಾವನಿಗೆ ಸಹಕಾರ, ಮಾರ್ಗದರ್ಶನ ಮಾಡಿದ ಪರಿಣಾಮ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮಿಂಚಿದ್ದಾಳೆ. ಶಾವನಿ ತಂದೆ ಆತ್ಮರಾಮ ಪಾಟೀಲ್ ಬಾದಲಗಾಂವ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ತಾಯಿ ರಂಜನಾ ಪಾಟೀಲ್ ಡಿಸೈನರ್ ಆಗಿದ್ದಾರೆ.