ಬೀದರ್: ಜಗತ್ತಿಗೆ ಪ್ರಥಮ ಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ್ದು ಬಸವಣ್ಣ. ಈ ವಿಷಯ ಎಲ್ಲೆಡೆ ಸಾರುವ ಅಗತ್ಯವಿದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್ ಹೇಳಿದರು.
ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ, ಅಕ್ಕನಾಗಲಾಂಬಿಕಾ ಮಹಿಳಾ ಗಣ ಸಹಯೋಗದಡಿ ನಗರದ ಬಸವ ಮಂಟಪದಲ್ಲಿ ಏರ್ಪಡಿಸಿದ್ದ ಅಭಿನಂದನೆ ಮತ್ತು ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮಾತನಾಡಿ, ಈಚೆಗೆ ದಕ್ಷಿಣ ಆಫ್ರಿಕಾದಲ್ಲಿ ಬಸವ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ವಚನಗಳ ಆಧಾರಿತ ಸ್ಮರಣಿಕೆಯನ್ನು ಅಲ್ಲಿನ ಜನತೆಗೆ ನೀಡಿದಾಗ ನಮಗೆ ಏನು ಬೇಕಿತ್ತೋ ಅದನ್ನು ನೀಡಿದ್ದೀರಿ ಎಂದು ಹೆಮ್ಮೆಪಟ್ಟಿದ್ದರು ಎಂದು ಪ್ರವಾಸವನ್ನು ಸ್ಮರಿಸಿದರು.
ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ದಕ್ಷಿಣ ಆಫ್ರಿಕಾ ಜನತೆ ಮುಗ್ಧರು, ಹೃದಯವಂತರು. ಕರಿಯರು ಮತ್ತು ಬಿಳಿಯರ ಮಧ್ಯೆ ತಾರತಮ್ಯ ಹೋಗಲಾಡಿಸಲು ಮಹಾತ್ಮ ಗಾಂ ಹಾಗೂ ನೆಲ್ಸನ್ ಮಂಡೇಲಾ ಹೋರಾಟ ಮಾಡಿದ ಮತ್ತು ಸತ್ಯಾಗ್ರಹ ನಡೆಸಿದ ಸ್ಥಳಕ್ಕೆ ಭೇಟಿ ನೀಡಿದ್ದು ಖುಷಿ ವಿಷಯ. 2025ರಲ್ಲಿ ಇಂಗ್ಲೆಂಡ್ನ ಲಂಡನ್ ನಲ್ಲಿ ಬಸವ ತತ್ವ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಬಸವ ಮಂಟಪದ ಪೂಜ್ಯ ಮಾತೆ ಸತ್ಯಾದೇವಿ, ಲಿಂಗಾಯತ ಧರ್ಮ ಮಹಾಸಭಾ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ, ಕಾಶಪ್ಪ ಸೀತಾ, ಬಸವರಾಜ ಸಂಗಮದ, ಬಸವಂತರಾವ ಬಿರಾದಾರ್, ಮನ್ಮಥಯ್ಯ ಸ್ವಾಮಿ, ವಿಶ್ವನಾಥ ಉಪ್ಪೆ, ಶಾಂತಪ್ಪ ಮುಗಳಿ, ಗುರುನಾಥ ನಿಡಗುಂದಿ, ಶಿವಾಜಿ ಭೋಸ್ಲೆ, ಶ್ರೀನಾಥ ಕೋರೆ, ಗಣಪತಿ ಬಿರಾದಾರ್, ಸತೀಶ ಪಾಟೀಲ್, ನಿರ್ಮಲಾ ನಿಲಂಗೆ ಇತರರಿದ್ದರು.
ದಕ್ಷಿಣ ಆಫ್ರಿಕಾದಲ್ಲಿ ಬಸವ ತತ್ವ ಪ್ರಚಾರಗೈದು ತವರಿಗೆ ಆಗಮಿಸಿದ ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ, ಬಸವಕುಮಾರ ಪಾಟೀಲ್, ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ಸೋಮಶೇಖರ ಮಹಾಗಾಂವ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅಕ ಅಂಕ ಪಡೆದ ಬಸವ ಮಂಟಪದ ವಿದ್ಯಾರ್ಥಿನಿ ಕುಸುಮಾ ಅವರನ್ನು ಸನ್ಮಾನಿಸಲಾಯಿತು.