ಜಿಲ್ಲೆ

ಶಾಲಾ ವಾಹನ ಮಾಹಿತಿ ಒದಗಿಸಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಎಲ್ಲ ಶಾಲಾ, ಕಾಲೇಜಿನವರು ನಿಯಮದ ಪ್ರಕಾರ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಓಡಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶಿರೋಳಕರ್ ತಿಳಿಸಿದ್ದಾರೆ.
ಶಾಲಾ ವಾಹನದ ದಾಖಲಾತಿಗಳನ್ನು ಇರಿಸಿಕೊಳ್ಳಬೇಕು. ವಾಹನದಲ್ಲಿ ಸಿಸಿ ಕ್ಯಾಮರಾ ಮತ್ತು ಜಿಪಿಎಸ್ ಅಳವಡಿಸಿರಬೇಕು. ಪ್ರಥಮ ಚಿಕಿತ್ಸೆ ಬಾಕ್ಸ್, ತುರ್ತು ನಿರ್ಗಮನದ ದ್ವಾರ ಹೊಂದಿರಬೇಕು. ರೆಟ್ರೋ ರಿಫ್ಲೆಕ್ಟರ್, ಫಿಟ್ನೆಟ್ ಪ್ರಮಾಣ ಪತ್ರ, ವಿಮೆ, ಎಮಿಶನ್ ಪ್ರಮಾಣ ಪತ್ರ ಹೊಂದಿರಬೇಕು. ಶಾಲೆ ಅನುಮತಿ ಪ್ರಮಾಣ ಪತ್ರ ಬೇಕು. ಸೀಟುಗಳು ಕಂಫಟ್೯ ಆಗಿರಬೇಕು. ಚಾಲಕರ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಎಲ್ಲ ದಾಖಲಾತಿಗಳ ಜತೆಗೆ ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ಶಾಲಾ ವಾಹನದಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದರೆ ಮಹಿಳಾ ನಿರ್ವಾಹಕಿಯರನ್ನು ಕಡ್ಡಾಯವಾಗಿ ನೇಮಿಸಬೇಕು. 15 ವರ್ಷಗಳ ನಂತರ ಶಾಲಾ ವಾಹನ ಓಡಿಸುವಂತಿಲ್ಲ. ಒಂದು ವಾರದಲ್ಲಿ ಎಲ್ಲವನ್ನೂ ಸರಿಪಡಿಸಿ ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೆರಿಗೆ ವಾಹನಗಳ ನೋಂದಣಿ ಸಂಖ್ಯೆ ಸಹಿತಿ ವರದಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ದಾಖಲಾತಿ ಸಲ್ಲಿಸಲು ನಿರ್ಲಕ್ಷ್ಯ ಮಾಡಿದರೆ ಸಿಎಂವಿ ಆ್ಯಕ್ಟ್ 1988ರಂತೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ ತಮ್ಮ ಶಾಲಾ ಕಾಲೇಜಿನ ಎಲ್ಲ ವಾಹನಗಳ ನಂಬರ್ಗಳನ್ನು ನಮೂದಿಸಿ ಕಚೇರಿಗೆ ಒಂದು ವಾರದ ಒಳಗಾಗಿ ದೃಢೀಕರಣ ಪತ್ರ ನೀಡಬೇಕು ಎಂದು ಹೇಳಿದ್ದಾರೆ.