ಜಿಲ್ಲೆ

ಮಕ್ಕಳು ಸಮಯಕ್ಕೆ ಆದ್ಯತೆ ಕೊಡಲಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧಿಸಲು ಪ್ರಯತ್ನ ಮಾಡಬೇಕು. ಸಮಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಎಸ್.ಬಿ. ಪಾಟೀಲ್ ಕಾಲೇಜು ಅಧ್ಯಕ್ಷ ಡಾ.ಸೂರ್ಯಕಾಂತ ಪಾಟೀಲ್ ಕಿವಿಮಾತು ಹೇಳಿದರು.
ನೌಬಾದ್ ಬಳಿಯ ಎಸ್.ಬಿ. ಪಾಟೀಲ್ ದಂತ ಕಾಲೇಜಿನಲ್ಲಿ ಆಯೋಜಿಸಿದ್ದ ದಂತ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಧಕರು, ಮಹಾತ್ಮರ ಜೀವನ ಆದರ್ಶವಾಗಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದರು.
ಕಾಲೇಜಿನಲ್ಲಿ ಹೊಸ ಮೈಕ್ರೋಸ್ಕೋಪ್ ಪರಿಚಯಿಸುವ ಮೂಲಕ ದಂತ ಚಿಕಿತ್ಸೆಯ ನಿಖರತೆ ಮತ್ತು ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗಿದೆ. ಈ ಹೊಸ ಉಪಕರಣ ದಂತ ಶಿಕ್ಷಣ ಮತ್ತು ಚಿಕಿತ್ಸಾ ಕ್ಷೇತ್ರದಲ್ಲಿ ಉನ್ನತ ತಂತ್ರಜ್ಞಾನದ ಬಳಕೆಯನ್ನು ಸಜ್ಜುಗೊಳಿಸುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ಮಾಶಲ್ಕರ್ ಶೈಲೇಂದ್ರ, ಡಾ.ರುತಿಕಾ, ಡಾ.ಶರತ್ಚಂದ್ರ ಪಾಟೀಲ್, ಡಾ.ಮಹ್ಮದ್ ಮುಬೀನ್ ಇತರರಿದ್ದರು. ಈ ವೇಳೆ ಹೊಸ ಮೈಕ್ರೋಸ್ಕೋಪ್ ಉದ್ಘಾಟಿಸಲಾಯಿತು.