oplus_1026 
ಜಿಲ್ಲೆ

ತಂತ್ರಜ್ಞಾನ ಅಳವಡಿಕೆಯಿಂದ ಕೃಷಿ ಲಾಭದಾಯಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬೆಳೆವಾರು ಸೂಕ್ತ ಯೋಜನೆ ರೂಪಿಸಿ ನಿಖರವಾದ ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಕೃಷಿ ಲಾಭದಾಯಕವಾಗಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ ಎನ್.ಎಂ. ಹೇಳಿದರು.
ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ದಲ್ಲಿ ಆಯೋಜಿಸಿದ್ದ ಮುಂಗಾರು ಹಂಗಾಮು ಪೂರ್ವಸಿದ್ಧತೆ ಸಭೆ ಮತ್ತು ಶುಂಠಿ ಬೆಳೆ ಬೇಸಾಯ ತರಬೇತಿ ಉದ್ಘಾಟಿಸಿದ ಅವರು, ತಂತ್ರಜ್ಞಾನ ಬೆಳೆ ಖರ್ಚು ತಗ್ಗಿಸುವ ಜತೆಗೆ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎಂದರು.
ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ತಜ್ಞ ಡಾ.ಬಸವರಾಜ ಅವರು ಮುಂಗಾರು ಮಳೆ ಹಾಗೂ ಹವಾಮಾನ ಮಾಹಿತಿ ನೀಡಿದರು. ಮಣ್ಣು ಮಾದರಿ ಪರೀಕ್ಷೆ ಮತ್ತು ಅದರ ಫಲಿತಾಂಶ ಆಧಾರದ ಮೇಲೆ ಬೆಳೆಗಳಿಗೆ ಪೋಷಕಾಂಶ ಕುರಿತು ಕೆವಿಕೆಯ ಮಣ್ಣು ವಿಜ್ಞಾನದ ತಾಂತ್ರಿಕ ಅಕಾರಿ ಧನರಾಜ ವಿ.ಎಸ್., ಮುಂಗಾರು ಬೆಳೆಗಳಲ್ಲಿ ತಳಿಗಳ ಆಯ್ಕೆ, ಬೀಜೋಪಚಾರ ಮತ್ತು ಬೇಸಾಯ ಕ್ರಮ ಕುರಿತು ಕೃಷಿ ಅಧಿಕಾರಿ ಡಾ.ಜ್ಞಾನದೇವ ಬುಳ್ಳಾ, ಶುಂಠಿ ಬೆಳೆಗಾಗಿ ಭೂಮಿ ಸಿದ್ಧತೆ, ಬೀಜ ಗಡ್ಡೆಗಳ ಉಪಚಾರ, ಲಘು ಪೋಷಕಾಂಶಗಳ ಕೊರತೆ ಲಕ್ಷಣ ಮತ್ತು ನಿರ್ವಹಣೆ ಕುರಿತು ತೋಟಗಾರಿಕೆ ವಿಜ್ಞಾನಿ ಡಾ.ನಿಂಗದಳ್ಳಿ ಮಲ್ಲಿಕಾರ್ಜುನ ಹಾಗೂ ತೋಟಗಾರಿಕೆ ಬೆಳೆಗಳ ಕುರಿತು ಇಲಾಖೆ ಜೈವಿಕ ಕೇಂದ್ರದ ಸಹಾಯಕ ನಿರ್ದೇಶಕ ನಿಲಾಂಜನ್ ಮಾಹಿತಿ ನೀಡಿದರು.