ಜಿಲ್ಲೆ

ರಾಜಶೇಖರಗೆ ಎಂಎಲ್ಸಿ ಮಾಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಪಿ. ರಾಜಶೇಖರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಿಸುವಂತೆ ಹೈದರಾಬಾದ್ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಸಂಘದ ವಕ್ತಾರ ಈ.ಕುಮಾರ ಆಗ್ರಹಿಸಿದ್ದಾರೆ.
ನಾಲ್ಕು ದಶಕಗಳಿಂದ ಕಾಂಗ್ರೆಸ್ನಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಶ್ರಮಿಸುತ್ತಿರುವ ರಾಜಶೇಖರ ಹಿರಿತನ ಮತ್ತು ಅನುಭವ ಪರಿಗಣಿಸಿ ಎಂಎಲ್ಸಿ ಮಾಡಿದರೆ ಕ್ರೈಸ್ತ ಸಮಾಜಕ್ಕೆ ಆದ್ಯತೆ ಸಿಕ್ಕಂತಾಗಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಘ ಜಿಲ್ಲಾ ಕಾರ್ಯದರ್ಶಿ ಸುನೀಲ ಬಚ್ಚನ್ ಮಾತನಾಡಿ, ಮೊದಲಿನಿಂದಲೂ ಕ್ರೈಸ್ತರು ಕಾಂಗ್ರೆಸ್ ಬೆಂಬಲಿಸುತ್ತ ಬಂದಿದ್ದಾರೆ. ಆದರೆ ಕಲ್ಯಾಣ ಕರ್ನಾಟಕದಲ್ಲಿ 10 ಲಕ್ಷ ಜನಸಂಖ್ಯೆಯ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ. ಹೀಗಾಗಿ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ರಾಜಶೇಖರ ಅವರಿಗೆ ಮನ್ನಣೆ ನೀಡಬೇಕೆಂದು ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷ ಅನೀಲ ನಿಡೋದಾ ಮಾತನಾಡಿ, ನಮ್ಮ ಸಮುದಾಯ ಕಾಂಗ್ರೆಸ್ ಬೆಂಬಲಿಸಿದರೂ ಸಿದ್ದರಾಮಯ್ಯ ಸರ್ಕಾರ ಕಡೆಗಣಿಸುತ್ತಿದೆ. ರಾಜಶೇಖರ ಅವರಿಗೆ ಎಂಎಲ್ಸಿ ಮಾಡುವ ಮೂಲಕ ನ್ಯಾಯ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರಮುಖರಾದ ಶರದ ಘಂಟೆ, ಸಾವನ್ ಕೋಟೆ, ತಿಮೋತಿ ಸಾಯಿಮನ್, ರಾಬಟ್೯ ಇತರರಿದ್ದರು.