ಜಿಲ್ಲೆ

ಮನ್ನಾಏಖೇಳ್ಳಿ ಆಸ್ಪತ್ರೆಗೆ ಬೆಲ್ದಾಳೆ ದಿಢೀರ್ ಭೇಟಿ

ರೇವಣಸಿದ್ದಪ್ಪ ಪಾಟೀಲ್

ಚಿಟಗುಪ್ಪ: ತಾಲೂಕಿನ ಮನ್ನಾಏಖೇಳ್ಳಿ ಗ್ರಾಮದಲ್ಲಿರುವ ಸಕರ್ಾರಿ ಆಸ್ಪತ್ರೆಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವುದಕ್ಕೆ ಗ್ರಾಮಕ್ಕೆ ಬಂದಿದ್ದ ಶಾಸಕ ಬೆಲ್ದಾಳೆ ಅವರು ನಂತರ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿನ ವ್ಯವಸ್ಥೆ, ಹಾಸಿಗೆಗಳ ಕೊಠಡಿ, ಸ್ಕ್ಯಾನಿಂಗ್ ಮಷೀನ್, ಹೊರ ಮತ್ತು ಒಳ ರೋಗಿಗಳಿಗೆ ದೊರಕುವ ಸೌಲಭ್ಯಗಳು ಇತ್ಯಾದಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲ ತಜ್ಞ ವೈದ್ಯರು, ಸಿಬ್ಬಂದಿ ಗೈರಿಗೆ ಕಾರಣವೇನು ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರಶ್ನಿಸಿದರು. ಡಿಎಎಚ್ಒ ಅವರಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಒಟ್ಟು ಸಿಬ್ಬಂದಿ ವಿವರ ಸಹ ಪಡೆದು ದಾಖಲಾತಿ ಪರಿಶೀಲಿಸಿದರು.
ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು. ರೋಗಿಗಳಿಗೆ ಸಕರ್ಾರದ ಎಲ್ಲ ಸೌಲಭ್ಯ ಒದಗಿಸಬೇಕು. ಯಾವುದೇ ಕಾರಣಕ್ಕೂ ತಾರತಮ್ಯ ಸಲ್ಲದು. ಸಿಬ್ಬಂದಿ ನಿಯಮಿತವಾಗಿ ಕರ್ತವ್ಯ ನಿರ್ವಹಿಸಬೇಕು. ನಿರ್ಲಕ್ಷ್ಯ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಸ್ಪತ್ರೆ ಆರೋಗ್ಯಾಕಾರಿಗೆ ಬೆಲ್ದಾಳೆ ಎಚ್ಚರಿಕೆ ನೀಡಿದರು.