ಜಿಲ್ಲೆ

ನಿರ್ಣಾ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ ದಿನ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸದೆ ಬೇಜವಾಬ್ದಾರಿ ತೋರಿದ ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಪಂ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ರಡ್ಡಿ ಸಮಾಜದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಾಜದ ಪ್ರಮುಖರು, ಹೇಮರಡ್ಡಿ ಮಲ್ಲಮ್ಮ ಅವರಿಗೆ ಪಿಡಿಒ ಅಗೌರವ ತೋರಿದ್ದಾರೆ. ಸಂಬಂಧಿಸಿದ ತಾಪಂ ಇಒಗೆ ಮನವಿಪತ್ರ ಸಲ್ಲಿಸಿದ್ದರೂ ಪಿಡಿಒ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ. ಹೀಗೆ ನಿರ್ಲಕ್ಷ್ಯ ಮುಂದುವರಿಸಿದರೆ ಮೇ 21ರಂದು ನಿರ್ಣಾ ಗ್ರಾಪಂ ಎದುರು ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಸಮಾಜದ ಜಿಲ್ಲಾಧ್ಯಕ್ಷ ಶಂಕರರಡ್ಡಿ ಚಿಟ್ಟಾ, ಯುವ ಘಟಕದ ಜಿಲ್ಲಾಧ್ಯಕ್ಷ ಸಂತೋಷರಡ್ಡಿ ಆಣದೂರ, ಪೆಂಟಾರಡ್ಡಿ, ವಿಜಯರಡ್ಡಿ ದೀಪಕರಡ್ಡಿ, ಜಗನ್ನಾಥರಡ್ಡಿ, ಯಮಾರಡ್ಡಿ, ಕೃಷ್ಣಾರಡ್ಡಿ, ಸುಭಾಷರಡ್ಡಿ, ವೆಂಕಟರಡ್ಡಿ, ಬಲವಂತರಡ್ಡಿ, ಸಾಯಿನಾಥರಡ್ಡಿ ಇತರರಿದ್ದರು.