ಬೀದರ್: ಆಂಗ್ಲ ದೈನಿಕ ದಿ ಹಿಂದು ಪತ್ರಿಕೆಯಿಂದ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಹಿಂದು ಎಜುಕೇಷನ್ ಪ್ಲಸ್ ಕರಿಯರ್ ಕೌನ್ಸೆಲಿಂಗ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ವಿವಿಧ ಕೋಸ್೯ಗಳ ಕುರಿತು ಮಾಹಿತಿ ಪಡೆದುಕೊಂಡರು.
ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ ಇತರರು ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮುನ್ನ ಕೆಲ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು. ತಮಗಿಷ್ಟವಾದ ಮತ್ತು ಆಸಕ್ತಿದಾಯಕ ಕೋಸ್೯ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೋಸ್೯ಗಳ ಆಯ್ಕೆ ವೇಳೆ ಒತ್ತಡ ಅಥವಾ ಇತರರ ಪ್ರಭಾವಕ್ಕೆ ಒಳಗಾಗಬೇಡಿ. ಸಾಮಥ್ರ್ಯ ಮತ್ತು ದೌರ್ಬಲ್ಯ ಅರಿಯಬೇಕು. ಯಾವುದು ಉತ್ತಮ ಎಂದು ನಿರ್ಧರಿಸಲು ನೀವೇ ನ್ಯಾಯಾಶರು. ಸ್ನೇಹಿತರು ಮತ್ತು ಹಿತೈಷಿಗಳ ಅಭಿಪ್ರಾಯ ಪಡೆಯುವುದು ಕೆಟ್ಟ ವಿಷಯವಲ್ಲ. ಆದರೂ ನೀವು ಯಾವುದರಲ್ಲಿ ಉತ್ತಮರು ಎಂಬುದನ್ನು ಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ನೀವು ಎಂದರು.
ಮೊದಲು ನಾವು ಉತ್ತಮ ಮನುಷ್ಯರಾಗಲು ಸಾಧ್ಯವಾಗದಿದ್ದರೆ ಉತ್ತಮ ಅಧಿಕಾರಿಯಾಗಲು ಸಾಧ್ಯವಿಲ್ಲ. ಹೆಚ್ಚಿನ ವೇತನದ ಕೆಲಸ ಪಡೆಯುವುದಕ್ಕಿಂತ ಉತ್ತಮ ಮಾನವನಾಗಲು ಆದ್ಯತೆ ನೀಡಬೇಕು. ದೇಶದ ಭವಿಷ್ಯ ಬದಲಾಯಿಸುವಲ್ಲಿ ಯುವ ಪೀಳಿಗೆ ಪಾತ್ರ ಪ್ರಮುಖವಾಗಿದೆ. ಸಮಾಜವನ್ನು ಉತ್ತಮ ರೀತಿಯಲ್ಲಿ ಬದಲಾಯಿಸುವ ಹೆಚ್ಚಿನ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಶಾಹೀನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ವೃತ್ತಿ ಸಲಹೆಗಾರ ಸೈಯದ್ ಸಾದತ್ ಪಾಶಾ, ಬ್ರಿಮ್ಸ್ ನ ಡಾ.ಮಲ್ಲಿಕಾಜರ್ುನ ಜಿ.ಬಿ., ಭಾಲ್ಕಿ ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಧ್ಯಾಪಕ ರಾಜಶೇಖರ ಮಠಪತಿ, ಜಿಎನ್.ಡಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ದಯಾನಂದ ಜಮಖಂಡಿಕರ್ ಮಾತನಾಡಿದರು.