ಜಿಲ್ಲೆ

ಜಿಲ್ಲಾ ಮೆಥೋಡಿಸ್ಟ್ ಚರ್ಚ್ ಜಾತ್ರೆ 17ಕ್ಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಮಂಗಲಪೇಟ್ನ ಜಿಲ್ಲಾ ಮೆಥೋಡಿಸ್ಟ್ ಚರ್ಚ್ ವಾರ್ಷಿಕ ಜಾತ್ರಾ ಮಹೋತ್ಸವ ಮೇ 17ರಿಂದ ಮೂರು ದಿನ ಜರುಗಲಿದೆ.
ಭಕ್ತಿ ಸಂಜೀವನ ಕೂಟ, ದೈವ ಸಂದೇಶ, ಸಂಗೀತ-ಭಜನೆ ಸ್ಪಧರ್ೆ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಿಷಪ್ ಎನ್.ಎಲ್. ಕರ್ಕರೆ ಮತ್ತು ಎನ್.ಎ. ಪೌಲ್ ಬೆಂಗಳೂರು ವಿಶೇಷ ಸಂದೇಶಕರಾಗಿ ಆಗಮಿಸಲಿದ್ದಾರೆ.
17ರಂದು ಬೆಳಗ್ಗೆ 10ಕ್ಕೆ ದೈವಾರಾಧನೆ ಮತ್ತು ಭಜನೆ ಸ್ಪರ್ಧೆ, ಸಂಜೆ 6ಕ್ಕೆ ಎರಡನೇ ಅವ ದೈವಾರಾಧನೆ, 7ಕ್ಕೆ ಹೊರಡುವ ಮೆರವಣಿಗೆ ನಗರದ ವಿವಿಧೆಡೆ ಸುತ್ತಾಡಿ ಪುನಃ ಮೆಥೋಡಿಸ್ಟ್ ಚರ್ಚ್ ಗೆ ಆಗಮಿಸಲಿದೆ. 18ರಂದು ಬೆಳಗ್ಗೆ 10ಕ್ಕೆ ದೈವಾರಾಧನೆ, ಭಜನೆ ಸ್ಪರ್ಧೆ, ಸಂಜೆ 4ಕ್ಕೆ ಆಟೋಟ ಸ್ಪಧರ್ೆ, ರಾತ್ರಿ 8ಕ್ಕೆ ಸರಪಳಿ ಪ್ರಾರ್ಥನೆ ಬಳಿಕ ಕೋರಿಯಾ ತಂಡದವರಿಂದ ಕಂಟಾಟ ನಾಟಕ ಪ್ರದರ್ಶನ ಹಾಗೂ ಚಲನಚಿತ್ರ ಪ್ರದರ್ಶನ (ಕರುಣಮೈಡು ಹಾಗೂ ಮೋಶೆ ಚರಿತ್ರೆ)ವಿದೆ.
19ರಂದು ಬೆಳಗ್ಗಿನ ಜಾವ 5ಕ್ಕೆ ಮರ್ಜಾಪುರ ಗವಿಯಲ್ಲಿ ಸೂರ್ಯೋದಯ ಆರಾಧನೆ, 10ಕ್ಕೆ ದೈವಾರಾಧನೆ ಮತ್ತು ಹರಕೆ ಕಾಣಿಕೆಗಳ ಸ್ವೀಕಾರ, ಬಹುಮಾನ ವಿತರಣೆ, ಹರಾಜು ಮತ್ತು ದೈವಾಶೀರ್ವಾದ ಕಾರ್ಯಕ್ರಮ ನಡೆಯಲಿದೆ. ಮೂರು ದಿನದ ಎಲ್ಲ ಕಾರ್ಯಕ್ರಮಗಳಿಗೆ ಸಮಾಜದವರು ಹೆಚ್ಚಿನ ಸಂಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಂಜುಕುಮಾರ ಡಾಕುಳಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.