ಜಿಲ್ಲೆ

ಅಪಘಾತದಲ್ಲಿ ಮೂವರು ಸಾವು

ರೇವಣಸಿದ್ದಪ್ಪ ಪಾಟೀಲ್

ಬೀದರ್: ಚಟ್ನಳ್ಳಿ ಗ್ರಾಮ ಹೊರವಲಯದ ಸೋಲಾರ್ ವಿದ್ಯುತ್ ಘಟಕದ ಹತ್ತಿರ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ.
ಚಿಟಗುಪ್ಪ ತಾಲೂಕಿನ ಚಾಂಗಲೇರಾ ಗ್ರಾಮದ ವಿನೋದಕುಮಾರ ಪ್ರಭು (25), ವರದೇಶ್ ಶರಣಪ್ಪ ಬೇಡರ್ (25) ಹಾಗೂ ಯಾಕತಪುರದ ಕ್ರೂಷರ್ ಚಾಲಕ ಪ್ರದೀಪ ಶಂಕರ ಕೋಲಿ (25) ಮೃತರು. ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಕ್ರೂಷರ್ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಚಾಂಗಲೇರಾದ ಸಂಜುಕುಮಾರ ಬೆನಕೆಪಳ್ಳಿ (26), ಮಂಜುಕುಮಾರ ಬೆನಕೆಪಳ್ಳಿ (19) ಸಹೋದರರನ್ನುಬ್ರಿಮ್ಸ್ಗೆ ದಾಖಲಿಸಲಾಗಿದೆ.
ಬೆಳಗ್ಗಿನ ಜಾವ ಚಟ್ನಳ್ಳಿ ಯಾಕತಪುರ ಶಿವಾರದಲ್ಲಿ ಬೇಟೆಯಾಡಲು ಐವರು ಕ್ರೂಷರ್ನಲ್ಲಿ ಹೊರಟಿದ್ದರು. ವಾಪಸ್ ಬರುವಾಗ ಅತಿ ವೇಗ ಮತ್ತು ಚಾಲಕ ನಿದ್ರೆ ಮಂಪರಿಗೆ ಜಾರಿದ್ದರಿಂದ ಘಟನೆ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಚನ್ನಬಸವಣ್ಣ ಲಂಗೋಟಿ, ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ, ಪಿಎಸ್ಐ ಸುಕಾನಂದ ಸಿಂಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮನ್ನಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಡಾ.ಬೆಲ್ದಾಳೆ ಭೇಟಿ: ಅಪಘಾತದ ವಿಷಯ ತಿಳಿಯುತ್ತಲೇ ಬ್ರಿಮ್ಸ್ಗೆ ದೌಡಾಯಿಸಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮೃತಪಟ್ಟವರ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಗಾಯಗೊಂಡ ಸಂಜುಕುಮಾರ, ಮಂಜುಕುಮಾರ ಆರೋಗ್ಯ ವಿಚಾರಿಸಿದರು.