ಜಿಲ್ಲೆ

ಬಸವರಾಜ ಬಲ್ಲೂರಗೆ ಪಿಎಚ್‍.ಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ರಾಜಸ್ತಾನದ ಸನ್ ರೈಸ್ ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪಡೆದ ವಿದ್ಯಾ ವಿಕಾಸ ಫಾರ್ಮಸಿ ಕಾಲೇಜು ಪ್ರಾಚಾರ್ಯ ಬಸವರಾಜ ಎಸ್. ಬಲ್ಲೂರ ಅವರನ್ನು ನಗರದ ನೌಬಾದ್‍ನ ಗೋವಿಂದರಾವ್ ಮುಳೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.
ಬಲ್ಲೂರ ಅವರು ಪ್ರಾಧ್ಯಾಪಕ ಡಾ. ಸಂಗಮೇಶ ಪುರಾಣಿಕ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಸಿಂಥೆಸಿಸ್ ಆಫ್ ನಾವೆಲ್ ಪೈರಜೋಲೈನ್ಸ್ ಆ್ಯಂಡ್ ಪಿಡಿಮಿಡಿನ್ ಡೆರಿವೆಟಿವ್ಸ್ ಫಾರ್ ದೇರ್ ಪೊಟೆಂಟ್ ಫಾರ್ಮಾಲಾಜಿಕಲ್ ಆ್ಯಕ್ಟಿವಿಟೀಸ್' ಪ್ರೌಢ ಪ್ರಬಂಧವನ್ನು ಪಿಎಚ್‍ಡಿಗೆ ಮಾನ್ಯ ಮಾಡಿದೆ.
ವಿದ್ಯಾ ವಿಕಾಸ ಟ್ರಸ್ಟ್ ಕಾರ್ಯದರ್ಶಿ ಸತೀಶಕುಮಾರ ಮುಳೆ, ಆಡಳಿತಾಧಿಕಾರಿ ಸಿದ್ಧರಾಮ ಮೇಲ್ಕೇರಿ, ಗೋವಿಂದರಾವ್ ಮುಳೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ರಾಚಪ್ಪ ಖರ್ಗೆ, ಪ್ರಾಧ್ಯಾಪಕರಾದ ದೇವರಾಜ ಪಾಟೀಲ, ಚಂದ್ರಕಾಂತ ಕಾಂಬಳೆ, ಸ್ವಾಮಿ, ವಿದ್ಯಾ ವಿಕಾಸ ಟ್ರಸ್ಟ್ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.