ಜಿಲ್ಲೆ

ಶಕ್ತಿ ಪ್ರದಶರ್ನದೊಂದಿಗೆ ಖೂಬಾ ನಾಮಪತ್ರ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕೇಂದ್ರ ಸಚಿವರೂ ಆದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಭಗವಂತ ಖೂಬಾ ನಗರದಲ್ಲಿ ಗುರುವಾರ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದರು.
ಗಣೇಶ ಮೈದಾನದಲ್ಲಿ ಸಮಾವೇಶ ನಡೆಸಿದ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರಡ್ಡಿ ಅವರಿಗೆ ಉಮೇದುವಾರಿಕೆ ದಾಖಲಿಸಿದರು. ಇದಕ್ಕೂ ಮುನ್ನ ಸಮಾವೇಶದಲ್ಲಿ ಮಾತನಾಡಿದ ಖೂಬಾ, ಸಚಿವ ಈಶ್ವರ ಖಂಡ್ರೆ ಮಾತ್ರ ಸುಳ್ಳು ಹೇಳುತ್ತಾರೆ ಎಂದಿದ್ದೆ. ಆದರೆ ಕಾಂಗ್ರೆಸ್ ಅಭ್ಯಥರ್ಿ ಸಾಗರ್ ಸಹ ತಂದೆಯಂತೆ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ವಾಗ್ದಾಳಿ ನಡೆಸಿದರು.
ಸಮಾವೇಶ ಮುಗಿಯಲು ವಿಳಂಬವಾಯಿತು. ಮಧ್ಯಾಹ್ನ 3ರೊಳಗೆ ನಾಮಪತ್ರ ಸಲ್ಲಿಸಬೇಕಿದ್ದರಿಂದ ಖೂಬಾ ಅವರು ಬೆಂಬಲಿಗರೊಂದಿಗೆ ಡಿಸಿ ಕಚೇರಿಗೆ ಓಡೋಡಿ ಬಂದು ಉಮೇದುವಾರಿಕೆ ಸಲ್ಲಿಸಿದರು.
ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ, ಎಸ್.ಕೆ. ಬೆಳ್ಳುಬ್ಬಿ, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಡಾ.ಅವಿನಾಶ ಜಾಧವ್, ಡಾ.ಸಿದ್ದಲಿಂಗಪ್ಪ ಪಾಟೀಲ್, ಶಶೀಲ್ ನಮೋಶಿ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಮಲ್ಲಿಕಾಜರ್ುನ ಖೂಬಾ, ಎಂ.ಜಿ. ಮುಳೆ, ಸುಭಾಷ ಗುತ್ತೇದಾರ್, ಪ್ರಮುಖರಾದ ಉಮಾಕಾಂತ ನಾಗಮಾರಪಳ್ಳಿ, ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ್ ಠಾಕೂರ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿದರು. ಪ್ರಮುಖರಾದ ರಮೇಶ ಪಾಟೀಲ್ ಸೋಲಪುರ, ಶಿವಾನಂದ ಮಂಠಾಳಕರ್, ಬಾಬು ವಾಲಿ, ಡಿ.ಕೆ. ಸಿದ್ರಾಮ, ಶಶಿಧರ ಹೊಸಳ್ಳಿ, ಶಿವರಾಜ ಗಂದಗೆ ಇತರರಿದ್ದರು.