ಬಸವಕಲ್ಯಾಣ: ದ್ವಿತೀಯ ಪಿಯುಸಿಯಲ್ಲಿ ಪತ್ರಿಕಾ ಏಜೆಂಟರೊಬ್ಬರ ಪುತ್ರ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿ ಗಮನ ಸೆಳೆದಿದ್ದಾನೆ.
ತಾಲೂಕಿನ ಧನ್ನೂರಾ(ಕೆ) ಗ್ರಾಮದ ವಿಜಯವಾಣಿ ಪತ್ರಿಕೆ ವಿತರಕ (ಏಜೆಂಟ್)ರಾದ ಸೋಮನಾಥ ಬಚೆಣೆ ಅವರ ಪುತ್ರ ಚೇತನ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 552 (ಶೇ. 92) ಅಂಕ ಪಡೆದು ಅಗ್ರಶ್ರೇಣಿಯಲ್ಲಿ ಪಾಸಾಗಿದ್ದಾನೆ.
ಗಣಿತ 100, ರಾಸಾಯನ ಶಾಸ್ತ್ರ 97, ಜೀವಶಾಸ್ತ್ರ 97, ಕನ್ನಡದಲ್ಲಿ 96, ಭೌತಶಾಸ್ತ್ರದಲ್ಲಿ 96 ಹಾಗೂ ಇಂಗ್ಲಿಷ್ ವಿಷಯದಲ್ಲಿ 72 ಅಂಕ ಪಡೆದಿದ್ದಾರೆ.
ನಗರದ ಶ್ರೀ ಬಸವೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿ ಚೇತನ್ ಬಚೆಣೆ ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.