ಬೀದರ್: ಆಂಧ್ರಪ್ರದೇಶದ ಶ್ರೀಶೈಲ್ ಕ್ಷೇತ್ರದಲ್ಲಿ ಶ್ರೀ ಭ್ರಮರಾಂಬಾ, ಶ್ರೀ ಮಲ್ಲಿಕಾರ್ಜುನರ ಐತಿಹಾಸಿಕ ಜಾತ್ರಾ ಮಹೋತ್ಸವದ ನಿಮಿತ್ತ ಅಕ್ಕಮಹಾದೇವಿ ಸಂಸ್ಮರಣೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿದೆ.
ಏ.9ರಂದು ಬೆಳಗ್ಗೆ 7ಕ್ಕೆ ಅಲ್ಲಿನ ಅಕ್ಕಮಹಾದೇವಿ ಚೈತನ್ಯ ಪೀಠದಿಂದ ಹೊರಡುವ ಉತ್ಸವಕ್ಕೆ ಪೂಜ್ಯ ಕರುಣಾದೇವಿ ಮಾತೆ ಚಾಲನೆ ನೀಡುವರು. ಮೆರವಣಿಗೆಯು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪ್ರದಕ್ಷಿಣೆ ಹಾಕಿ, ವೀರಭದ್ರ ಸ್ವಾಮಿ, ನಂದಿ ಸರ್ಕಲ್ ಮೂಲಕ ಚೈತನ್ಯ ಪೀಠಕ್ಕೆ ಆಗಮಿಸಲಿದೆ. ನಂತರ ಅಲ್ಲಿ ಧರ್ಮಸಭೆ ನಡೆಯಲಿದೆ ಎಂದು ಚೈತನ್ಯ ಪೀಠದ ಸಂಚಾಲಕ ಶ್ರೀ ಡಾ.ರಾಜಶೇಖರ ಶಿವಾಚಾರ್ಯ ತಿಳಿಸಿದ್ದಾರೆ.