ಬೀದರ್: ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಇಲ್ಲಿಯ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಶಿವಾಜಿ ಮಹಾರಾಜ ಜೀವನ ಕುರಿತ ನಾಟಕ ಸಭಿಕರ ಗಮನ ಸೆಳೆಯಿತು.
ಮಕ್ಕಳು ಮನೋಜ್ಞ ಅಭಿನಯದ ಮೂಲಕ ಶಿವಾಜಿ ಮಹಾರಾಜರ ಬಾಲ್ಯ, ಶೌರ್ಯ ಹಾಗೂ ಆದರ್ಶ ತತ್ವಗಳ ಮೇಲೆ ಬೆಳಕು ಚೆಲ್ಲಿದರು.
ವಿವಿಧ ಶಾಲೆಗಳ ಮಕ್ಕಳು ಗೆರಿಲ್ಲಾ ಯುದ್ಧದ ರೂಪಕ, ನೃತ್ಯ, ಗಾಯನ ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಜಿಲ್ಲೆಯ 17 ಶಾಲೆಗಳ ಮಕ್ಕಳು ಪ್ರತಿಭೆ ಪ್ರದರ್ಶಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ ದಿಲೀಪ ಬದೋಲೆ ಮಾತನಾಡಿ, ಶಿವಾಜಿ ಮಹಾರಾಜರು ವೀರ ರಾಜ ಆಗಿದ್ದರು ಎಂದು ನುಡಿದರು.
ಶಿವಾಜಿ ಮಹಾರಾಜರ ಆದರ್ಶ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನಿರಗುಡೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ, ಶಿವ ಕ್ಷತ್ರಪತಿ ಸ್ಮಾರಕ ಸಮಿತಿ ಕಾರ್ಯದರ್ಶಿ ಸತೀಶ ಮುಳೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಪ್ರಮುಖರಾದ ವೆಂಕಟೇಶ ಮಾಯಿಂದೆ, ವಿದ್ಯಾವಾನ್ ಪಾಟೀಲ, ನಿವೃತ್ತ ಡಯಟ್ ಉಪನ್ಯಾಸಕ ಮಾಧವರಾವ್ ಬಿರಾದಾರ, ಜೀಜಾಮಾತಾ ಕನ್ಯಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ, ವಾಸುದೇವ ರಾಠೋಡ್, ರಮೇಶ ಬಿರಾದಾರ, ಪಂಡಿತ ಬಾಳೂರೆ, ಪ್ರತಾಪ ಸೂರ್ಯವಂಶಿ, ವಿವೇಕರಾವ್ ಪಾಟೀಲ, ಆನಂದ ಜಾಧವ್, ಸಂಜಯ್ ಪಾಟೀಲ, ಅನಿಲಕುಮಾರ, ಅರ್ಜುನ ಧೂಳೆ, ಮಲ್ಲಿಕಾರ್ಜುನ, ಪ್ರಭಣ್ಣ ಕಾಳಗೊಂಡ, ಬಸವರಾಜ ಮತ್ತಿತರರು ಇದ್ದರು.
ರಾಜಕುಮಾರ ಗಾದಗೆ ಸ್ವಾಗತಿಸಿದರು. ತಾನಾಜಿ ನಿರಗುಡೆ ನಿರೂಪಿಸಿದರು. ಕುಮಾರಸ್ವಾಮಿ ವಂದಿಸಿದರು.