ಬೀದರ್: ಗೋವಿನಲ್ಲಿ ಎಲ್ಲ ದೇವರು ವಾಸವಾಗಿದ್ದಾರೆ ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಭಾರತೀಯ ಸಂಸ್ಕøತಿಯಲ್ಲಿ ಗೋವಿಗೆ ಪೂಜ್ಯನೀಯ ಸ್ಥಾನ ಇದೆ. ಅಂತೆಯೇ ಪ್ರತಿ ಶುಭ ಕಾರ್ಯವನ್ನೂ ಗೋವಿನ ಪೂಜೆಯೊಂದಿಗೆ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಗೋ ಮೂತ್ರ, ಸೆಗಣಿ, ಹಾಲು, ತುಪ್ಪದಲ್ಲಿ ಔಷಧೀಯ ಗುಣ ಇದೆ. ಗೋವಿನ ಸೆಗಣಿಯಿಂದ ಸಾರಿಸುವ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ತಿಳಿಸಿದರು.
ಗೋವನ್ನು ಮಾತೆಗೆ ಹೋಲಿಸಲಾಗುತ್ತದೆ. ಗೋವಿನ ಪೂಜೆಯಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ. ಪ್ರತಿಯೊಬ್ಬರೂ ಗೋವುಗಳ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ನಂದಿ ಶಿವನ ವಾಹನ, ಕಾವಲುಗಾರ ಆಗಿದ್ದಾನೆ. ಈತನನ್ನು ನಂದೀಶ್ವರ ಎಂದೂ ಕರೆಯಲಾಗಿದೆ. ಜಾತ್ರೆಗಳು ಗ್ರಾಮಗಳಲ್ಲಿ ಸಾಮರಸ್ಯ ನೆಲೆಗೊಳಿಸುತ್ತವೆ. ಬಾಂಧವ್ಯ ಗಟ್ಟಿಗೊಳಿಸುತ್ತವೆ ಎಂದು ತಿಳಿಸಿದರು.
ಉದ್ಯಮಿ ರಾಚಪ್ಪ ಪಾಟೀಲ, ಪ್ರಸಾದ ದಾನಿ ಶರಣಪ್ಪ ಕಾಗೆ, ಗ್ರಾಮದ ಗಣ್ಯರು ಇದ್ದರು.