ಬೀದರ್: ಸಂವಿಧಾನ ಜಾಗೃತಿ ಜಾಥಾ ಈಚೆಗೆ ಔರಾದ್ ಹಾಗೂ ಕಮಲನಗರ ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಸಂಚರಿಸಿತು.
ಗ್ರಾಮ ಪಂಚಾಯಿತಿಗಳ ಸಂಚಾರದ ನಂತರ ಹೆಡಗಾಪುರ ಮಾರ್ಗವಾಗಿ ಭಾಲ್ಕಿ ತಾಲ್ಲೂಕಿಗೆ ತೆರಳಿತು. ಸಂವಿಧಾನದ ಜಾಗೃತಿಗೆ ಹಮ್ಮಿಕೊಂಡಿದ್ದ ಜಾಥಾ ಯಶಸ್ವಿಯಾಗಿದೆ. ಜಾಥಾದಲ್ಲಿ ಸಂವಿಧಾನದ ಆಶಯಗಳ ಬಗ್ಗೆ ಜನಜಾಗೃತಿ ಮೂಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಔರಾದ್ ತಾಲ್ಲೂಕು ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ ಹೇಳಿದರು.
ವಸತಿ ನಿಲಯಗಳ ಮೇಲ್ವಿಚಾರಕರು, ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.