ಬೀದರ್: ದೇಶದ 75ನೇ ಗಣರಾಜ್ಯೋತ್ಸವ ಅಂಗವಾಗಿ ತಾಲ್ಲೂಕಿನ ಅಷ್ಟೂರು ಗ್ರಾಮದಲ್ಲಿ 75 ಸಂವಿಧಾನ ಪೀಠಿಕೆ ಫಲಕ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿದೇವಿ ಹೊಸಮನಿ ಅವರು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಸಿಬ್ಬಂದಿ, ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕವಾಗಿ ಸಂವಿಧಾನ ಪೀಠಿಕೆ ಫಲಕ ವಿತರಿಸಿದರು.
ಸಂವಿಧಾನದ ಆಶಯಗಳನ್ನು ಎಲ್ಲರಿಗೂ ತಲುಪಿಸುವ ಸದಾಶಯದೊಂದಿಗೆ ಫಲಕ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.
ಪಂಚಾಯಿತಿ ಅಧ್ಯಕ್ಷೆ ರೇಣುಕಾ ರಾಹುಲ್, ಉಪಾಧ್ಯಕ್ಷೆ ಪ್ರೇಮಲಾ ಮೋಹನ್, ಸದಸ್ಯರಾದ ಸಂಜೀವಕುಮಾರ, ರಾಜು ಪಾಟೀಲ, ಕಸ್ತೂರಿಬಾಯಿ, ಲಲಿತಾ, ಕುಶಾಲರಾವ್, ಶರಣಪ್ಪ, ರಾಹುಲ್, ವಿಜಯಕುಮಾರ, ಬಾಬುರಾವ್, ಶಿವನಂದಾ, ವಿಜಯಲಕ್ಷ್ಮಿ, ಜಗದೇವಿ, ಭಾನುಬಿ ಮತ್ತಿತರರು ಇದ್ದರು.