ಬೀದರ್: ಇಲ್ಲಿಯ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದ ಮಯೂರಾ ಹೊಟೇಲ್‍ನಲ್ಲಿ ಜ. 28 ರಂದು ಬೆಳಿಗ್ಗೆ 11.45ಕ್ಕೆ ವಿಶ್ವ ಕರ್ಮ ಸಮಾಜದ ಸಭೆ ಕರೆಯಲಾಗಿದೆ.
ಸುಲೆಪೇಟದ ಏಕದಂಡಗಿ ಮಠದ ದೊಡ್ಡೇಂದ್ರ ಸ್ವಾಮೀಜಿ ಉಪಸ್ಥಿತರಿರುವರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಯುವ ಘಟಕ ರಚನೆ ಹಾಗೂ ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಜಿಲ್ಲೆಯ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಮಾಜದ ಯುವ ಮುಖಂಡ ಪ್ರಶಾಂತ ವಿಶ್ವಕರ್ಮ ಮನವಿ ಮಾಡಿದ್ದಾರೆ.