ಬೀದರ್: ಇಲ್ಲಿಯ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಚರ್ಮ ರೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅಶೋಕಕುಮಾರ ನಾಗೂರೆ ಅವರು ಬರೆದ ಅಧ್ಯಾಯವೊಂದು ಐಎಡಿವಿಎಲ್ ಡರ್ಮಟಾಲಜಿಯ ಪಠ್ಯಪುಸ್ತಕ ಸೇರಿದೆ.
ಎಂ.ಬಿ.ಬಿ.ಎಸ್, ಎಂ.ಡಿ. ವಿದ್ಯಾರ್ಥಿಗಳಿಗೆ ಸಿದ್ಧಪಡಿಸಲಾದ ಸಂಕ್ಷಿಪ್ತ ಪಠ್ಯಪುಸ್ತಕದಲ್ಲಿ 42 ಅಧ್ಯಾಯ ಇವೆ. 'ಡಿಫರೆನ್ಶಿಯಲ್ ಡಯಾಗ್ನಸಿಸ್ ಇನ್ ಡರ್ಮಟಾಲಜಿ' ಶೀರ್ಷಿಕೆಯ
ಅಧ್ಯಾಯ ಸಂಖ್ಯೆ 5 ರ ಲೇಖಕ ನಾಗೂರೆ ಆಗಿದ್ದಾರೆ.
ಪಠ್ಯಪುಸ್ತಕ ಬಿಡುಗಡೆ: ನಗರದ ಬ್ರಿಮ್ಸ್‍ನಲ್ಲಿ ಪಠ್ಯಪುಸ್ತಕ ಬಿಡುಗಡೆ ಮಾಡಲಾಯಿತು.
ಬ್ರಿಮ್ಸ್ ಸಹ ಪ್ರಾಧ್ಯಾಪಕರ ಅಧ್ಯಾಯ ಪಠ್ಯಕ್ರಮದ ಭಾಗವಾಗಿದ್ದಕ್ಕೆ ಬ್ರಿಮ್ಸ್ ಅಧಿಕಾರಿಗಳು ಹಾಗೂ ವೈದ್ಯರು ಸಂತಸ ವ್ಯಕ್ತಪಡಿಸಿದರು.
ಡಾ. ನಾಗೂರೆ ಅವರು ಬ್ರಿಮ್ಸ್‍ನಲ್ಲಿ ಚರ್ಮ ರೋಗಕ್ಕೆ ಸಂಬಂಧಿಸಿದ ಪ್ರಥಮ ಕಾರ್ಯಾಗಾರ ಸಂಘಟಿಸಿದ್ದರು. ಬ್ರಿಮ್ಸ್‍ನ ಮೊದಲ ಅಕಾಡೆಮಿಕ್ ಆ್ಯಪ್ ಅಡ್ಮಿನ್ ಆಗಿ ಕೆಲಸ ನಿರ್ವಹಿಸಿದ ಹಿರಿಮೆಗೂ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.
ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್, ಡಾ. ಅಶೋಕಕುಮಾರ ನಾಗೂರೆ, ಡಾ. ಶಿವಯೋಗಿ ಶಿಬಾಲಿ, ಡಾ. ಪ್ರಶಾಂತ ಪಾಟೀಲ, ಡಾ. ಮಹೇಶ ತೊಂಡಾರೆ, ಡಾ. ಶಾಂತಲಾ ಕೌಜಲಗಿ, ಡಾ. ಉಮಾ ದೇಶಮುಖ, ಡಾ. ಪರಮೇಶ್ವರ, ರಾಜಕುಮಾರ ಹೆಬ್ಬಾಳೆ ಮೊದಲಾದವರು ಇದ್ದರು.