ಜಿಲ್ಲೆ

ಸಿದ್ಧರಾಮೇಶ್ವರ ತತ್ವಾದರ್ಶ ಪಾಲಿಸಿ

ರೇವಣಸಿದ್ದಪ್ಪ ಪಾಟೀಲ್

ಹುಮನಾಬಾದ್: ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ತತ್ವಾದರ್ಶ ಹಾಗೂ ಸಾಮಾಜಿಕ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಸಿಂದಬಂದಗಿ ಗ್ರಾಮದಲ್ಲಿ ಭೋವಿ ಸಮಾಜ ಸಂಘ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವ ಉದ್ಘಾಟಿಸಿದ ಅವರು, ಶರಣರು ಒಂದು ಸಮಾಜಕ್ಕೆ ಸೀಮಿತರಾಗಿರದೆ ಎಲ್ಲೆಡೆ ಸಮಾನತೆ ಸಾರಿದವರು. ಅಂಥ ಶರಣರು ಜೀವಿಸಿದ ನಾಡಿನಲ್ಲಿ ನಾವೆಲ್ಲ ಆದರ್ಶ ಬದುಕು ನಡೆಸಬೇಕು. ಭಕ್ತಿಗೆ ಬಸವಣ್ಣ, ವೈರಾಗ್ಯಕ್ಕೆ ಅಲ್ಲಮಪ್ರಭು ಹೇಗೋ ಕಾಯಕಕ್ಕೆ ಸಿದ್ಧರಾಮೇಶ್ವರರು. ಸಮಾಜ ಸುಧಾರಣೆಗೆ ಬೆಂಬಲವಾಗಿ ನಿಂತು ಕಾಯಕ ಮಾಡುತ್ತ ಹಲವು ಕೆರೆಗಳನ್ನು ನಿರ್ಮಿಸಿದ್ದಾರೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಹಣಮಂತ ಮಾಳಗಿಮನಿ, ತಾಲೂಕು ಅಧ್ಯಕ್ಷ ಸಂಜು ವಾಡೇಕರ್, ಪ್ರಧಾನ ಕಾರ್ಯದರ್ಶಿ ಅಭಿಷೇಕ ವಾಡೇಕರ್, ಅವಿನಾಶ ಪವಾರ್, ರಾಮರಡ್ಡಿ ಪೊಲೀಸ್ ಪಾಟೀಲ್, ದಯಾನಂದ ಪಾಟೀಲ್ ಇತರರಿದ್ದರು.