ಬೀದರ್: ತಾಯಿಯಿಂದ ಮಗುವಿಗೆ ಹರಡುವ ಎಚ್‍ಐವಿ, ಸಿಫಿಲಿಸ್ ಹಾಗೂ ಹೆಪಟೈಟಿಸ್ ಜಾಗೃತಿ ಕಾರ್ಯಕ್ರಮ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಡೆಯಿತು.
ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಯೋಗಿ ಅವರು ಎಚ್‍ಐವಿ, ಸಿಫಿಲಿಸ್ ಹಾಗೂ ಹೆಪಟೈಟಿಸ್ ತಾಯಿಯಿಂದ ಮಗುವಿಗೆ ಹೇಗೆ ಹರಡುತ್ತದೆ ಎನ್ನುವುದನ್ನು ವಿವರಿಸಿದರು.
40 ಗರ್ಭಿಣಿಯರ ಸಾಮೂಹಿಕ ಸೀಮಂತ ನೆರವೇರಿಸಲಾಯಿತು. ವೈದ್ಯಾಧಿಕಾರಿಗಳಾದ ಸರಿತಾ, ಡಾ. ಪ್ರತಿಭಾ, ಜೈಶೀ, ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕಿ ವಾಣಿ, ಪಿಪಿಟಿಸಿಟಿ ಕೇಂದ್ರದ ಆಪ್ತ ಸಮಾಲೋಚಕಿ ಸುನಿತಾ, ಅನಿತಾ ಇದ್ದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಹಾಗೂ ಬ್ರಿಮ್ಸ್ ಆಸ್ಪತ್ರೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.